•  
  •  
  •  
  •  
Index   ವಚನ - 222    Search  
 
ಇರುಳಿನ ಸಂಗವ ಹಗಲೆಂದರಿಯರು, ಹಗಲಿನ ಸಂಗವನಿರುಳೆಂದರಿಯರು. ವಾಯಕ್ಕೆ ನಡೆವರು, ವಾಯಕ್ಕೆ ನುಡಿವರು, ವಾಯುಪ್ರಾಣಿಗಳು. ಗುಹೇಶ್ವರನೆಂಬ ಅರುಹಿನ ಕುರುಹು ಇನ್ನಾರಿಗೆಯೂ ಅಳವಡದು.
Transliteration Iruḷina saṅgava hagalendariyaru, hagalina saṅgavaniruḷendariyaru. Vāyakke naḍevaru, vāyakke nuḍivaru, vāyuprāṇigaḷu. Guhēśvaranemba aruhina kuruhu innārigeyū aḷavaḍadu.
Hindi Translation रात का संग दिन में नहीं जानते, दिनका संग रात में नहीं जानते, व्यर्थ चलते हैं, व्यर्थ बोलते हैं, व्यर्थ जीवी हैं। गुहेश्वरा जैसे ज्ञान का चिह्न किसी को भीन हीं है। Translated by: Eswara Sharma M and Govindarao B N
Tamil Translation இருள் பகலுடன் தொடர்புடையதை அறியார் பகல் இருளுடன் தொடர்புடையதையறியார். பயனின்றி மேற்கொண்டு, பயனின்றி பேசுவர் வாயுபிராணிகள் குஹேசுவரனெனு ஞான அடையாளம் எவருக்கும் வசமாமோ? Translated by: Smt. Kalyani Venkataraman, Chennai
ಶಬ್ದಾರ್ಥಗಳು ಅವರು = ಶಾಬ್ದಜ್ಞಾನವೂ ಕೂಡ ಅಜ್ಞಾನಕ್ಕಿಂತ ಬಹಳ ಬೇರೆಯಲ್ಲ ಎಂಬುದನ್ನು ಅರಿಯದವರು; ಅವರು ವಾಯುಪ್ರಾಣಿಗಳು = ವಾಯು ಆಧಾರಿತ ಬದುಕಿಗೆ ಅಂಟಿಕೊಂಡವರು; ಜಡಜೀವಿಗಳು; ಇರುಳು = ಆತ್ಮ ವಿಷಯಕ ಅಜ್ಞಾನ; ವಾಯಕ್ಕೆ ನಡೆವರು = ವ್ಯರ್ಥವಾಗಿ ಆಚರಿಸುವರು, ಅರ್ಚನಾದಿ ಕ್ರಿಯೆಗಳನ್ನು; ವಾಯಕ್ಕೆ ನುಡಿವರು = ವ್ಯರ್ಥವಾಗಿ ಆತ್ಮವನ್ನು ಕುರಿತಾಗಿ ಯಥೇಚ್ಛ ಮಾತನಾಡುವವರು; ಹಗಲು = ಆತ್ಮವಿಷಯಕ ಶಾಬ್ದಿಕಜ್ಞಾನ; Written by: Sri Siddeswara Swamiji, Vijayapura