•  
  •  
  •  
  •  
Index   ವಚನ - 243    Search  
 
ಹೃದಯದ ಬಾವಿಯ ತಡಿಯಲ್ಲಿ ಒಂದು ಬಾಳೆ ಹುಟ್ಟಿತ್ತು! ಆ ಬಾಳೆಯ ಹಣ್ಣ ಮೆಲಬಂದ ಸರ್ಪನ ಪರಿಯ ನೋಡಾ. ಬಾಳೆ ಬೀಗಿ ಸರ್ಪನೆದ್ದೆಡೆ- ನಿರಾಳವು ಕಾಣಾ ಗುಹೇಶ್ವರಾ.
Transliteration Hr̥dayada bāviya taḍiyalli ondu bāḷe huṭṭittu! Ā bāḷeya haṇṇa melabanda sarpana pariya nōḍā. Bāḷe bīgi sarpaneddeḍe- nirāḷavu kāṇā guhēśvarā.
Hindi Translation हृदय कुएँ किनारे पर एक कदली उत्पन्न हुई थी ! उस कदली को खाने आये सर्प की रीति देखो। कदली नाश होकर सर्प जागृत हो तो निर्मल हुआ देखो गुहेश्वरा । Translated by: Eswara Sharma M and Govindarao B N
Tamil Translation இதய கேணியின் ஓரத்தில் ஒரு வாழை தோன்றியது. அவ்வாழையின் கனியைச் சுவைக்க வந்த பாம்பின் நிலையைக் காணாய், வாழை அழிந்து, பாம்பு எழின் மிகத்தூய நிலையாம் காணாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ನಿರಾಳ = ನಿರಾವಿಲ, ನಿರ್ಮಲ, ಪರವಸ್ತು; ಬೀಗು = ನಾಶವಾಗು, ದೂರಾಗು; Written by: Sri Siddeswara Swamiji, Vijayapura