•  
  •  
  •  
  •  
Index   ವಚನ - 246    Search  
 
ಕರಿಯ ತಲೆಯ ಅರಮನೆಯ ಸುರಧೇನು ಹಯನಾಯಿತ್ತು! ಕರೆದುಂಬಾತಂಗೆ ಕೈಕಾಲಿಲ್ಲ! ಕರು ನಾಲ್ವೆರಳಿನ ಪ್ರಮಾಣದಲ್ಲಿಹುದು! ಇದ, ಕರೆದುಂಬಾತನೆ ದೇವ-ಗುಹೇಶ್ವರಾ.
Transliteration Kariya taleya aramaneya suradhēnu hayanāyittu! Karedumbātaṅge kaikālilla! Karu nālveraḷina pramāṇadallihudu! Ida, karedumbātane dēva-guhēśvarā.
Hindi Translation काला सिर की राजमहल की सुरधेनु दूध देने लगी; दुहकर खानेवाले का हाथ नहीं। बछडा चार अंगुलियों के माप का है। इसे दुह खानेवाले ही देव, गुहेश्वरा। Translated by: Eswara Sharma M and Govindarao B N
Tamil Translation மெய்ஞ்ஞான அரண்மனையில் அமுதம் பொழிகிறது அதனை அருந்துவோனுக்குக் கையில்லை கன்று நாலிதழ்த் தாமரையில் அசைந்தாடுகிறது அமுதத்தைக் கறந்து அருந்துவோனே இறைவன் குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಮನೆ = ವಿಶಾಲವಾದ ಪ್ರಶಾಂತ ಮಂದಿರ; ಇದ = ಸುರಧೇನುವನ್ನು; ಕರಿ = ಇದು ಬೃಹತ್ತಿನ ಸಂಕೇತ; ಕರಿಯ ತಲೆ = ಮಹಾಜ್ಞಾನ, ಶಿವನೇ ನಾನು ಎಂಬ ಮಹಾಪ್ರಜ್ಞೆ; ಕರು = ಸುಖಾಪೇಕ್ಷಿಯಾದ ಮನಸ್ಸು; ಕರೆದು ಉಂಬಾತ = ಕರೆದು ಉಣ್ಣುವವನು; ಶಿವಯೋಗಿಯು; ತಲೆ = ಇದು ಜ್ಞಾನದ ಸಂಕೇತ; ನಾಲ್ವೆರಳಿನ ಪ್ರಮಾಣದ = ನಾಲ್ದೆಸೆಯಲ್ಲಿ ಹರಿದಾಡುತ್ತಿಹುದು, ನಾಲ್ದಳ ಕಮಲವಾದ ಆಧಾರಚಕ್ರದಲ್ಲಿ ಸುಳಿದಾಡುತ್ತಿಹುದು, ಅಧೋಮುಖಿ ಮನಸ್ಸು; ಸುರಧೇನು ಹಯನಾಯಿತ್ತು = ಅಮೃತಬಿಂದುವು ಸುರಿಯಿತ್ತು; Written by: Sri Siddeswara Swamiji, Vijayapura