ಸಾಸಿರದೆಂಟನೆಯ ದಳದಲ್ಲಿ ಖೇಚರಿ ಚಲ್ಲಣಗಟ್ಟಿ,
ವಾಸುಗಿಯ ಫಣಾಮಣಿ ಪ್ರಜ್ವಲಿಸುವುದ ಕಂಡೆ.
ಅಸುರರೆಲ್ಲ ತಮತಮಗಂಜಿ ಓಸರಿಸಿ ಮುಂದೆ ನಡೆವಲ್ಲಿ,
ನಾಸಿಕ ಮನವ ಮುಸುಕುವುದ ಕಂಡೆ,
ತಾ ಸುಖಸ್ವರೂಪನಾದ; ಸುಖ ಮುಖಪ್ರವೇಶದಿಂದ!
ಗೋಸಾಸಿರ ನಡೆಗೆಟ್ಟವು ಗುಹೇಶ್ವರಾ,
ನಿಮ್ಮುವ ನೆರೆದೆನಾಗಿ.
Transliteration Sāsiradeṇṭaneya daḷadalli khēcari callaṇagaṭṭi,
vāsugiya phaṇāmaṇi prajvalisuvuda kaṇḍe.
Asurarella tamatamagan̄ji ōsarisi munde naḍevalli,
nāsika manava musukuvuda kaṇḍe,
tā sukhasvarūpanāda; sukha mukhapravēśadinda!
Gōsāsira naḍegeṭṭavu guhēśvarā,
nim'muva neredenāgi.
Hindi Translation एक हजार आठ दल में खेचरी आचरण कर
वासकी फन मणि प्रज्वलित होते देखा।
सब असुर अपने आप में डरकर आगे चले
नासिक भाव मन आक्रमित करते देखा।
निज सुख स्वरूपी सुखमुख प्रवेश से
आप की शरण में आने से
इंद्रिय सुख नाश हुए गुहेश्वरा।
Translated by: Eswara Sharma M and Govindarao B N
Tamil Translation ஸஹஸ்ராரத்தில் கேசரி முத்திரையைச் செய்து
வாசுகியின் படத்தில் மணி ஒளிர்ந்ததைக் கண்டேன்
அசுரர் அனைவரும் தமக்குள் அஞ்சி முன்னால் சென்றிட
சிவோஹம் மனத்தில் நிறைந்ததைக் கண்டேன்
பேரின்ப வடிவினனான சிவனைத் தரிசித்ததால்
குஹேசுவரனே, உம்முடன் இணைந்ததால்
இன்பத்தை நாடும் புலன்கள் அழிந்தன.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಸುರರು = ಶಿವಭಿನ್ನವಾದ ಅನ್ಯವಾಸನೆಗಳು; ಶಿವವಲ್ಲದ ವಾಸನೆಗಳು; ಖೇಚರಿ = ಇದೊಂದು ಮಹತ್ವದ ಮುದ್ರೆ. ಆಧಾರದಲ್ಲಿ ಬಂಧ, ಸುಸೂಕ್ಷ್ಮಗೊಂಡ ಪ್ರಾಣಗತಿ, ತೆರೆದೂ ತೆರೆಯದ
ಅನಿಮಿಷದೃಷ್ಟ, ಬ್ರಹ್ಮರಂಧ್; ಗೋಸಾಸಿರ = ಗೋ ಎಂದರೆ ಇಂದ್ರಿಯ, ಗೋಸಾಸಿರ ಎಂದರೆ ಸಹಸ್ರಾವಧಿ ಐಂದ್ರಿಯಿಕ ಸುಖವೃತ್ತಿಗಳು; ಚಲ್ಲಣಗಟ್ಟು = ಈ ಖೇಚರಿ ಮುದ್ರೆ ಎಂಬ ಚಲ್ಲಣವನ್ನು ಕಟ್ಟಿಕೊಳ್ಳುವುದು, ಅಂದರೆ ಖೇಚರಿ ಮುದ್ರೆಯನ್ನು ಆಚರಿಸುವುದು; ತಮತಮಗಂಜಿ ಓಸರಿಸಿ = ತಮ್ಮಷ್ಟಕ್ಕೆ ತಾವು ಅಂಜಿ ಸರಿದುಹೋಗಿ; ನಡೆಗೆಟ್ಟವು = ನಡೆಯಿಲ್ಲದಾದವು; ಶಾಂತವಾದವು; ನಾಸಿಕ = ಇದು ಶಿವೋಹಂ ಎಂಬ ಅಭಿನ್ನಭಾವದ ಸಂಕೇತ; ನೆರೆ = ಒಂದಾಗು; ಫಣಾಮಣಿ = ಆ ವಾಸುಕಿಯ ಹೆಡೆಯೊಳಗಿರುವ ರತ್ನ; ಮನವ ಮುಸುಕು = ಮನಸ್ಸನ್ನು ತುಂಬು; ವಾಸುಗಿ = ಕುಂಡಲಿನೀ ಶಕ್ತಿ; ಸಾಸಿರದೆಂಟನೆಯ ದಳ = ಸಾವಿರದೆಂಟು ದಳಗಳಿಂದ ಕೂಡಿದ ಸಹಸ್ರಾಚಕ್ರ, ಊರ್ಧ್ವಮಂಡಲ; ಸುಖಮುಖ = ಅನಂತ ಸುಖಸ್ವರೂಪವಾದ ಘನಸತ್ಯ, ಶಿವ ;
Written by: Sri Siddeswara Swamiji, Vijayapura