ವೇದ ಪ್ರಮಾಣವಲ್ಲ, ಕಾಣಿ ಭೋ!
ಆಗಮ ಪ್ರಮಾಣವಲ್ಲ, ಕಾಣಿ ಭೋ!
ಪುರಾಣ ಪ್ರಮಾಣವಲ್ಲ ಕಾಣಿ ಭೋ!
ಶಾಸ್ತ್ರ ಪ್ರಮಾಣವಲ್ಲ ಕಾಣಿ ಭೋ!
ಶಬ್ದ ಪ್ರಮಾಣವಲ್ಲ ಕಾಣಿ ಭೋ ಲಿಂಗಕ್ಕೆ!
ಲಿಂಗ ಅಂಗಸಂಗದ ಮಧ್ಯದಲ್ಲಿದ್ದುದ ಬೈಚಿಟ್ಟು ಬಳಸಿದ
ಗುಹೇಶ್ವರಾ ನಿಮ್ಮ ಶರಣ.
Hindi Translationवेद प्रमाण नहीं, देखो
आगम प्रमाण नहीं, देखो
पुराण प्रमाण नहीं, देखो लिंग को!
शास्त्र प्रमाण नहीं ,देखो
शब्द प्रमाण नहीं, देखो लिंग को
लिंग अंग संग के बीच में रहा छिपा रखा व्यवहार में लाया
गुहेश्वरा तुम्हारा शरण।
Translated by: Eswara Sharma M and Govindarao B N
English Translation
Tamil Translationவேதம் பிரமாணமன்று, சாத்திரம் பிரமாணமன்று
புராணம் பிரமாணமன்று, இலிங்க ஞானத்திற்கு காணீர்!
உடலுடனிருக்கும் மனத்தின் நடுவில் நிலைத்துள்ள
குஹேசுவரலிங்கத்தை யாருமறியாது உணர்வாய்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಪ್ರಾಣಲಿಂಗಿಸ್ಥಲ
ಶಬ್ದಾರ್ಥಗಳುಅಂಗ = ದೇಹ; ಅಂಗಸಂಗದ = ಆ ದೇಹಸಂಗತವಾಗಿರುವ ಮನಸ್ಸಿನ; ಪುರಾಣ = ಅಷ್ಟಾದಶಪುರಾಣಗಳು; ಪ್ರಮಾಣವಲ್ಲ = ಅಪರೋಕ್ಷ ಜ್ಞಾನಕ್ಕೆ ಸಾಧನಗಳಲ್ಲ; ಬೈಚಿಟ್ಟು ಬಳಸು = ರಹಸ್ಯವಾಗಿ ಅನುಭವಿಸು; ಮಧ್ಯದಲ್ಲಿದ್ದುದು = ಮಧ್ಯದಲ್ಲಿ ನೆಲೆಸಿರುವ ಪ್ರಾಣಲಿಂಗ; ಲಿಂಗ = ಪ್ರಾಣಲಿಂಗ; ವೇದ = ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ; ಶಾಸ್ತ್ರ = ತರ್ಕ, ಉತ್ತರಮೀಮಾಂಸೆ, ಪೂರ್ವಮೀಮಾಂಸೆ, ವ್ಯಾಕರಣ, ಜ್ಯೋತಿಷ ಮತ್ತು ಧರ್ಮಶಾಸ್ತ್ರ; Written by: Sri Siddeswara Swamiji, Vijayapura