ವಚನ - 279     
 
ಬಂದೂ ಬಾರದು ಹೊಂದಿಯೂ ಹೊಂದದು, ನಿಂದೂ ನಿಲ್ಲದ ಪರಿಯ ನೋಡಾ! ಬಿಂದು ನಾದವ ನುಂಗಿತ್ತು, ಮತ್ತೊಂದಧಿಕವುಂಟೆ? ನವಖಂಡ ಪೃಥ್ವಿಯನೊಳಕೊಂಡ ಬಯಲು ಅಗಮ್ಯ ಸಮಾಧಿ ಶಿವಯೋಗದಲ್ಲಿ ಗುಹೇಶ್ವರಲಿಂಗವೈದಾನೆ ಏನೆಂದುಪಮಿಸುವೆ!