ವಚನ - 280     
 
ನೆನೆವ ನೆನಹು ಮನದಲ್ಲಿಲ್ಲ, ತನುವಿನಲ್ಲಿ ಆಸೆಯಿಲ್ಲ. ನೆನವ ಮನವನತಿಗಳೆದ ಘನಕ್ಕೆ ಘನವೆಂತೆಂಬೆ? ತನ್ನಲ್ಲಿ ತಾನಾಯಿತ್ತು! ಭಿನ್ನವಿಲ್ಲದೆ ನಿಂದ ನಿಜವು. ಅನಾಯಾಸದ ಅನುವ ಕಂಡು ಆನು ಬೆರೆಗಾದೆನಯ್ಯಾ. ಎಂತಿದ್ದುದು ಅಂತೆ ಆದೆ, ಚಿಂತೆಯಿಲ್ಲದನುಭಾವ ಗುಹೇಶ್ವರಾ.