ಆಯತವಾಯಿತ್ತು ಅನುಭಾವ, ಸ್ವಾಯತವಾಯಿತ್ತು ಶಿವಜ್ಞಾನ,
ಸಮಾಧಾನವಾಯಿತ್ತು ಸದಾಚಾರ.
ಇಂತೀ ತ್ರಿವಿಧವು ಏಕರ್ಥವಾಗಿ,
ಅರುಹಿನ ಹೃದಯ ಕಂದೆರೆದು,
ಅನಂತಲೋಕಾಲೋಕದ ಅಸಂಖ್ಯಾತ ಮಹಾಗಣಂಗಳೆಲ್ಲರು
ಲಿಂಗಭಾವದಲ್ಲಿ ಭರಿತರಾಗಿ,
ಗಗನಸಿದ್ಧಾಂತದಿಂದ ಉಪದೇಶಕ್ಕೆ ಬಂದು,
ಭಕ್ತಿರಾಜ್ಯವನೆ ಹೊಕ್ಕು, ನಿಜಲಿಂಗಸುಕ್ಷೇತ್ರವನೆ ಕಂಡು,
ಅಮೃತಸರೋವರದೊಳಗಣ ವಿವೇಕವೃಕ್ಷ ಪಲ್ಲವಿಸಲು,
ವಿರಕ್ತಿಯೆಂಬ ಪುಷ್ಪ ವಿಕಸಿತವಾಗಲು,
ಪರಮಾನಂದವೆಂಬ ಮಠದೊಳಗೆ,
ಪರಿಣಾಮ ಪಶ್ಚಿಮಜ್ಯೋತಿಯ ಬೆಳಗಿನಲ್ಲಿ
ಪರುಷದ ಸಿಂಹಾಸನವನಿಕ್ಕಿ ಪ್ರಾಣಲಿಂಗ ಮೂರ್ತಿಗೊಂಡಿರಲು,
ದಕ್ಷಿಣವ ದಾಂಟಿ ಉತ್ತರಾಬ್ಧಿಯಲ್ಲಿ ನಿಂದು,
ಅಖಂಡ ಪರಿಪೂರ್ಣಪೂಜೆಯ ಮಾಡುವವರಿಗೆ
ನಮೋ ನಮೋ ಎಂಬೆ ಗುಹೇಶ್ವರಾ.
Transliteration Āyatavāyittu anubhāva, svāyatavāyittu śivajñāna,
samādhānavāyittu sadācāra.
Intī trividhavu ēkarthavāgi,
aruhina hr̥daya kanderedu,
anantalōkālōkada asaṅkhyāta mahāgaṇaṅgaḷellaru
liṅgabhāvadalli bharitarāgi,
Gaganasid'dhāntadinda upadēśakke bandu,
bhaktirājyavane hokku, nijaliṅgasukṣētravane kaṇḍu,
amr̥tasarōvaradoḷagaṇa vivēkavr̥kṣa pallavisalu,
viraktiyemba puṣpa vikasitavāgalu,
paramānandavemba maṭhadoḷage,
pariṇāma paścimajyōtiya beḷaginalli
paruṣada sinhāsanavanikki prāṇaliṅga mūrtigoṇḍiralu,
dakṣiṇava dāṇṭi uttarābdhiyalli nindu,
akhaṇḍa paripūrṇapūjeya māḍuvavarige
namō namō embe guhēśvarā.
Hindi Translation अनुभव आयत हुआ, शिवज्ञान स्वायत हुआ,
सदाचार समाधान हुआ।
ऐसे त्रिविध एकार्थ होकर ज्ञान चक्षु खोलकर
अनंत लोकालोक के असंस्वाता महागण
लिंगभाव में भरित होकर ,
गगन सिद्धांत से उपदेश पाकर,
भक्ति राज्य में प्रवेश कर लिंग सुक्षेत्र देखकर,
अमृत सरोवर में विवेक वृक्ष पल्लवित होने से,
विरक्त जैसा पुष्प विकसित होने से,
परमानंद मठ में
परिणाम पश्चिम ज्योति प्रकाश में
परुष सिंहासन रखकर प्राणलिंग उद्भव होकर,
दक्षिण लांघकर उत्तराब्धि में खडे होकर
अखंड परिपूर्ण पूजा करनेवालों को
नमो नमो कहूँगा गुहेश्वरा ।
Translated by: Eswara Sharma M and Govindarao B N
Tamil Translation இஷ்டலிங்கானுபவம் குருவருளால் சிவஞானம்
நன்னெறியால் விழிப்புணர்வு என்னும் மூன்றும்
ஒருங்கிணைய இதயத்தில் இலிங்கஉணர்வு அரும்ப
எண்ணற்ற உலகங்களின் மகாகணங்களனைவரும்
இலிங்க உணர்வில் மூழ்கித்திளைக்க
ஆன்மாவை உணர்ந்து அறிந்து கொண்டு
அனுபவ பக்தி எனும் நாட்டினுள் நுழைந்து, அதில்
ஸ்ரீகிரியைக் கண்டு, அமுதக் கடலில் விவேகமரம்
துளிர்த்திட, பற்றற்ற நிலை எனும் மலர் மலர
பரமானந்த மடத்திலே சின்மயலிங்க ஒளியிலே
பரிசவேதி அரியணையிலே பிராணலிங்கம் விளங்க
யோகசாதனையை நிறைவேற்றி, வடக்கிலே நின்று
அகண்ட முழுமையான பூஜையைச் செய்பவருக்கு
நமோ நமோ என்பேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಯತವಾಗು, ಸ್ವಾಯತವಾಗ = ಅಳವಡು; ಉತ್ತರಾಬ್ಧಿಯಲಿ ನಿಂದ = ಧ್ಯಾನಸ್ಥಿತಿಯಲ್ಲಿ ನಿಂತು; ಉಪದೇಶಕ್ಕೆ ಬರು = ಅಳವಡು; ಗಗನ = ಆತ್ಮ; ಗಗನಸಿದ್ದಾಂತ = ಆತ್ಮವಿದ್ಯೆ; ದಕ್ಷಿಣವ ದಾಂಟಿ = ಧ್ಯಾನಪೂರ್ವದ ಯೋಗಸಾಧನೆಯನ್ನು ಪೂರೈಸಿ; ಪರುಷದ ಸಿಂಹಾಸನ = ಪ್ರಣವನಾದವೆಂಬ ಸಿಂಹಾಸನ; ಪಶ್ಚಿಮಜ್ಯೋತಿಯ ಬೆಳಗ = ಪಶ್ಚಿಮಚಕ್ರದಿಂದ ಸೂಸಿಬರುವ ಚಿನ್ಮಯಲಿಂಗದ ಬೆಳಕು, ಪ್ರಭೆ; ಮಹಾಗಣಂಗಳು = ಮನೋವೃತ್ತಿಗಳು; ಲೋಕಾಲೋಕ = ಲೋಕಗಳು;
Written by: Sri Siddeswara Swamiji, Vijayapura