ಸುಳಿವ ಸುತ್ತುವ ಮನದ ವ್ಯವಹರಣೆಯುಳ್ಳನ್ನಕ್ಕರ,
ಅರಿಯೆನರಿಯೆ ನೆರೆ ಶಿವಪಥವ.
ಗುಹೇಶ್ವರಲಿಂಗದ ನಿಜವನರಿದ ಬಳಿಕ
ಅರಿಯೆನರಿಯೆ ಲೋಕದ ಬಳಕೆಯ.
Transliteration Suḷiva suttuva manada vyavaharaṇeyuḷḷannakkara,
ariyenariye nere śivapathava.
Guhēśvaraliṅgada nijavanarida baḷika
ariyenariye lōkada baḷakeya.
Hindi Translation चक्रवात मन का व्यवहार रहने तक
शिवपथ न जान जान सकता !
गुहेश्वर लिंग का निज जानने पर
न जान जानता लोक व्यवहार ।
Translated by: Eswara Sharma M and Govindarao B N
Tamil Translation சுழலும், சுற்றும் மனச் செயல்பாடுகள் உள்ள வரையில்
அறியேன், அறியேன், சிவபதம் கைகூடுமோ?
குஹேசுவரலிங்கத்தை உண்மை சொரூபத்தை உணர்ந்தபின்
உலகின் செயல்முறைகளை அறியேன், அறியேன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ನಿಜ = ನಿಜವಾದ(ಸತ್ಯ) ಸ್ವರೂಪ; ಲೋಕದ ಬಳಕೆ = ಲೋಕದ ಬಾಧಕವೂ ಬಂಧಕವೂ ಆದ ವ್ಯವಹಾರ; ವ್ಯವಹರಣೆ = ವಿಷಯಗಳನ್ನು ಗ್ರಹಿಸುವ, ಅತಿಯಾಗಿ ಪ್ರೀತಿಸುವ ಮತ್ತು ಅನುಭವಿಸುವ ಮನೋ ವ್ಯವಹಾರ;
Written by: Sri Siddeswara Swamiji, Vijayapura