ಅಂಗವಿಲ್ಲಾಗಿ ಅನ್ಯಸಂಗವಿಲ್ಲ,
ಅನ್ಯಸಂಗವಿಲ್ಲಾಗಿ ಮತ್ತೊಂದ ವಿವರಿಸಲಿಲ್ಲ.
ಮತ್ತೊಂದ ವಿವರಿಸಲಿಲ್ಲಾಗಿ ನಿಸ್ಸಂಗವಾಯಿತ್ತಯ್ಯಾ.
ಗುಹೇಶ್ವರಾ ನಿಮ್ಮ ನಾಮವಿಂತುಟಯ್ಯಾ.
Transliteration Aṅgavillāgi an'yasaṅgavilla,
an'yasaṅgavillāgi mattonda vivarisalilla.
Mattonda vivarisalillāgi nis'saṅgavāyittayyā.
Guhēśvarā nim'ma nāmavintuṭayyā.
Hindi Translation अंग न होने से अन्य संग नहीं ।
अन्य संग न होने से और एक का ब्योरा नहीं दिया ।
और एक का ब्योरा न देने से निःसंग हुआ ।
गुहेश्वरा, तुम्हारा नाम ऐसा है ।
Translated by: Eswara Sharma M and Govindarao B N
Tamil Translation உடலுணர்வு இல்லாததால் மற்றவற்றில் ஆர்வமில்லை
மற்றவற்றில் ஆர்வமின்மையால் மற்றொன்றை
விவரிப்பதில்லை. சிவனைத் தவிர வேறு நாட்டமின்மையால்
குஹேசுவரனே, உம் அடியார்தம் பெருமை இத்தன்மையதாம்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗ = ದೇಹ; ದೇಹೋsಹಂ ಭಾವ; ಜೀವಭಾವ.; ಅನ್ಯಸಂಗ = ಅನಾತ್ಮ ವಿಷಯಗಳ ಸಂಗ, ಆಸಕ್ತಿ; ಇಂತುಟು = ಇಂಥದು; ಶಿವನ ಶರಣರ ಮಹಿಮೆ ಇಂಥದು; ನಾಮ = ಮಹಿಮೆ, ಹಿರಿಮೆ; ನಿಃಸಂಗ = ನಿರ್ಲಿಪ್ತ, ನಿರಾಳ; ವಿವರಿಸು = ವರ್ಣಿಸು, ತೋರು; ವಿಂಗಡಿಸಿ ಹೇಳು;
Written by: Sri Siddeswara Swamiji, Vijayapura