•  
  •  
  •  
  •  
Index   ವಚನ - 306    Search  
 
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು, ತುಂಬಿ ನೋಡಾ! ಆತುಮ ತುಂಬಿ ತುಂಬಿ, ಪರಮಾತುಮ ತುಂಬಿ ತುಂಬಿ ನೋಡಾ! ಗುಹೇಶ್ವರನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ!
Transliteration Giḍuvina mēlaṇa tumbi kūḍe vikasitavāyittu, tumbi nōḍā! Ātuma tumbi tumbi, paramātuma tumbi tumbi nōḍā! Guhēśvaranemba liṅgakke eragi nibberagāyittu tumbi nōḍā!
Music Courtesy:
Hindi Translation पौधे पर का भ्रमर मिलकर विकसित हुआ था भ्रमर देखो ! आत्म भर भरकर देखो ! परमात्मा भर भरकर देखो ! गुहेश्वर जैसे लिंग को प्रणाम कर चकित हुआ था। भ्रमर देखो। Translated by: Eswara Sharma M and Govindarao B N
Tamil Translation செடியின் மீதுள்ள தும்பி முழுவதுமாக மலர்ந்துள்ளது முழுமையடைந்துள்ளதைக் காணாய்! ஆன்மா தும்பி தும்பி காணாய்! பரம்பொருள் தும்பி, தும்பி காணாய் குஹேசுவரனெனும் இலிங்கத்துடனிணைந்து ஆன்மீகப் பேரின்ப மெய்திய தும்பி காணாய்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಆತುಮ = ಆತ್ಮ; ಆತ್ಮಾನುಭವಿಯಾದ ಯೋಗಿ; ಎರಗು = ಸಮರ್ಪಿಸಿಕೊ, ಒಂದಾಗಿ ನಿಲ್ಲು; ಕೂಡೆವಿಕಸಿತವಾಗು = ಪೂರ್ಣವಿಕಾಸವಾಗು; ಗಿಡ = ದೇಹ; ತುಂಬಿ = ಜೀವ; ತುಂಬಿ = ಶಿವಭಾವದಿಂದ ತುಂಬಿದ ದುಂಬಿ, ಯೋಗಿ; ತುಂಬಿ = ದುಂಬಿ; ತುಂಬಿ = ಪೂರ್ಣವಸ್ತು; ತುಂಬಿ = ಪರಿಪೂರ್ಣ; ನಿಬ್ಬೆರಗು = ಆಧ್ಯಾತ್ಮಿಕ ಪರವಶಾವಸ್ಥೆ; ದೇವನೊಂದಿಗೆ ಬೆರೆತಾಗ ಉಂಟಾಗುವ ಪರಮಾನಂದದ ನಿಮಗ್ನಸ್ಥಿತಿ; ಪರಮಾತುಮ = ಪರಮಾತ್ಮ; Written by: Sri Siddeswara Swamiji, Vijayapura