ಅಂಗದ ಕೊನೆಯ ಮೇಲಣ
ಕೋಡಗ ಕೊಂಬಿಗೆ ಹಾರಿತ್ತು,
ಅಯ್ಯಾ, ಒಂದು ಚೋದ್ಯವ ನೋಡಾ
ಕೈಯ್ಯ ನೀಡಲು ಮೈಯೆಲ್ಲವನು ನುಂಗಿತ್ತು
ಒಯ್ಯನೆ ಕರೆದಡೆ ಮುಂದೆ ನಿಂದಿತ್ತು
ಮುಯ್ಯಾಂತಡೆ ಬಯಲಾಯಿತ್ತು-ಗುಹೇಶ್ವರಾ!
Transliteration Aṅgada koneya mēlaṇa
kōḍaga kombige hārittu,
ayyā, ondu cōdyava nōḍā
kaiyya nīḍalu maiyellavanu nuṅgittu
oyyane karedaḍe munde nindittu
muyyāntaḍe bayalāyittu-guhēśvarā!
English Translation 2 This monkey of a mind sits atop
This tree of a body.
And swings and bounds from bough to bough:
But here's a wonder, O Guhevara!
Hold but your hand out, he swallows you whole;
Call out to him gently, he comes and stands still:
But challenge him, he's just not there!
Hindi Translation शरीर की चोटी पर का बंदर
डाल पर कूदा था।
अय्या, एक आश्चर्य है।
हाथ पसारे तो शरीर को निगला था।
तुरंत बुलाये तो आगे खड़ा था।
चिंतन करें तो शून्य हुआ था, गुहेश्वरा।
Translated by: Eswara Sharma M and Govindarao B N
Tamil Translation உடலினுள்ளே உள்ள குரங்கு
கிளைக்குக் கிளை தாவுகிறது.
ஐயா, வியப்பிற்குரிய ஒரு செயல்!
கையை நீட்டினால் உடலையே விழுங்கியது
மகிழ்வுடன் அழைத்தால் அடங்கி விடுகிறது.
அரவணைப்பின் வயலாயிற்று குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗ = ಸ್ಥೂಲದೇಹ; ಒಯ್ಯನೆ ಕರೆದಡೆ = ರಮಿಸಿ ಕರೆದಡೆ; ಕೈನೀಡು = ಸಹಾಯ ಮಾಡು, ಅವಕಾಶ ಕೊಡು; ಕೊನೆಯ ಮೇಲಣ = ಸ್ಥೂಲದ ವ್ಯಾಪ್ತಿಯ ಆಚೆ ಇರುವುದು ಮನಸ್ಸು; ಮುಯ್ಯಾನ್ = ನಿಧಾನವಾಗಿ ಚಿಂತನೆಗೆ ತೊಡಗಿಸು;
Written by: Sri Siddeswara Swamiji, Vijayapura