ವಿರಹದಲುತ್ಪತ್ಯವಾದವರ,
ಮಾಯದ ಬೇಳುವೆ ಹತ್ತಿತ್ತಲ್ಲಾ!
ಸ್ವರೂಪ ನಿರೂಪವೆಂದರಿಯರು,
ಹೆಸರಿಟ್ಟು ಕರೆವ ಕಷ್ಟವ ನೋಡಾ ಗುಹೇಶ್ವರಾ.
Transliteration Virahadalutpatyavādavara,
māyada bēḷuve hattittallā!
Svarūpa nirūpavendariyaru,
hesariṭṭu kareva kaṣṭava nōḍā guhēśvarā.
Hindi Translation विरह में उत्पत्ती हुओं को माया व्यामोह लगा !
स्वरूप निरूप नहीं जानते।
नाम रख बुलाते कष्ट देखो गुहेश्वरा।
Translated by: Eswara Sharma M and Govindarao B N
Tamil Translation பிரிவுற்று, உடல் பெற்றவரை மாயையின் மப்பு சூழ்ந்தது
சொரூபம், வடிவமற்ற பரம்பொருளை அறியார்
பெயரிட்டு அழைக்கும் அவதியைக் காணாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಉತ್ಪತ್ತಿಯಾಗು = ದೇಹ ಧರಿಸು; ನಿರೂಪ = ಯಾವುದೇ ಆಕಾರವಿಲ್ಲದ, ಗುಣ ಹಾಗೂ ಕ್ರಿಯೆಗಳಿಲ್ಲದ ಪರವಸ್ತು.; ಮಾಯದ ಬೇಳುವೆ = ಮಾಯೆಯ ಮಬ್ಬು; ವಿರಹ = ಅಗಲುವಿಕೆ; ಸ್ವರೂಪ = ತನ್ನ ನಿಜವಾದ ರೂಪ;
Written by: Sri Siddeswara Swamiji, Vijayapura