ಅಂಗದ ಮೇಲೆ ಲಿಂಗ,
ಲಿಂಗದ ಮೇಲೆ ಅಂಗವಿದೇನೊ?
ಮನದ ಮೇಲೆ ಅರಿವು,
ಅರಿವಿನ ಮೇಲೆ ಕುರುಹು ಇದೇನೊ?
ನೀನೆಂಬಲ್ಲಿ ನಾನು, ನಾನೆಂಬಲ್ಲಿ ನೀನು.
`ನೀ' `ನಾ' ಎಂಬುದಕ್ಕೆ ತೆರಹಿಲ್ಲ ಗುಹೇಶ್ವರಾ.
Transliteration Aṅgada mēle liṅga,
liṅgada mēle aṅgavidēno?
Manada mēle arivu,
arivina mēle kuruhu idēno?
Nīnemballi nānu, nānemballi nīnu.
`Nī' `nā' embudakke terahilla guhēśvarā.
Hindi Translation अंग पर लिंग , लिंग पर अंग यह क्या ?
मन पर ज्ञान , ज्ञान पर चिह्न यह क्या ?
तुम कहने से मैं , मैं कहने से तुम ;
तू-मैं कहने का अवकाश नहीं गुहेश्वरा ।
Translated by: Eswara Sharma M and Govindarao B N
Tamil Translation உடலின்மீது இலிங்கம், இலிங்கத்தின் மீது உடல், இது என்னவோ?
மனத்தின் மீது அறிவு, அறிவின் மீது அடையாளமிது என்னவோ?
நீ எனின் நான், நான் எனின் நீ
நீ நான் என்பதற்கு வேறுபாடில்லை குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗ = ದೇಹ; ಆ ದೇಹದೊಳಗಿರುವ ಜೀವ; ನಾನು = ಆ ಲಿಂಗಸಾಕ್ಷಾತ್ಕಾರಿಯಾದ ಯೋಗಿಯು; ನೀನು = ಆ ಜ್ಞಾನಲಿಂಗವು; ಲಿಂಗ = ಬಾಹ್ಯ ಕುರುಹು, ಚೈತನ್ಯಘನವಸ್ತು;
Written by: Sri Siddeswara Swamiji, Vijayapura