ನೇಮಸ್ತನರಿವು ಪ್ರಪಂಚಿನಲ್ಲಿ ಹೋಯಿತ್ತು.
ಭಕ್ತನ ಅರಿವು ಸಮಾಧಾನದಲ್ಲಿ ಹೋಯಿತ್ತು.
ಜಂಗಮದ ಅರಿವು ಬೇಡಿದಲ್ಲಿ ಹೋಯಿತ್ತು.
ಇಂತು ಕ್ರಿಯಾಗಮದೊಳಗೆ ಅವಂಗವೂ ಇಲ್ಲ.
ಗುಹೇಶ್ವರಾ ನಿಮ್ಮ ಶರಣರಪೂರ್ವ.
Hindi Translationनियम पालक का ज्ञान प्रापंचिक सुख में गया।
भक्त का ज्ञान समाधान करने में गया।
जंगम ज्ञान माँगने में गया।
इस तरह क्रिया आगम में किसी अंग नहीं।
गुहेश्वरा तुम्हारे शरण अपूर्व है।
Translated by: Eswara Sharma M and Govindarao B N
English Translation
Tamil Translationநியமமுடையோனின் அறிவு அனுசரிப்பதில் சென்றது
பக்தனின் அறிவு சமாதானத்தில் சென்றது
ஜங்கமனின் அறிவு வேண்டுவதில் சென்றது
இச்செயல்முறையில் எந்த அம்சமும் இல்லை
குஹேசுவரனே, உம் சரணர் அரியவரன்றோ.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಪೂರ್ವ = ವಿರಳ; ಅರಿವು = ಬುದ್ದಿ, ಬದುಕು; ಆವಂಗವೂ = ಆವ ಅಂಗವೂ, ಯಾವ ಅಂಗವೂ, ಶಿವಾನುಭವದ ಯಾವ ಅಂಶವು; ಕ್ರಿಯಾಗಮ = ಶಾಸ್ತ್ರವಿಹಿತ ಆಚರಣೆ, ಸಾಧಕನಿಗೆ ಬಲ್ಲವರು ಆದೇಶಿಸಿದ ಆಚಾರ; ನೇಮಸ್ತ = ಲಿಂಗಾರ್ಚನಾದಿ ನಿತ್ಯನೇಮಂಗಳಲ್ಲಿ ತೊಡಗಿದವ; ಪ್ರಪಂಚು = ಆ ನೇಮಗಳನ್ನು ಆಚರಿಸುವ ವ್ಯವಹಾರ; ಹೋಯಿತ್ತು = ಕಳೆದುಹೋಯಿತ್ತು; Written by: Sri Siddeswara Swamiji, Vijayapura