ಶೀಲಶೀಲವೆಂಬ [ನೀಲಿಗ]ವಾರ್ತೆಯ ಬೇಳುವೆ,
ಬಾಲರಾಳಿಯಂತೆ ಆಳಿಗೊಂಡಿತ್ತು.
ಹೇಳಲಿಲ್ಲ ಕೇಳಲಿಲ್ಲದ ವಳಾವಳಿಯ ಬರಿಯ ಶಬ್ದ,
ಬಯಲ ಹೋರಟೆ!
ಅಂಗಸುಖಿಗಳಿಗೆ ಲಿಂಗವಿಲ್ಲಾಗಿ,
ಗುಹೇಶ್ವರನೆಂಬ ಶೀಲವು ಸೀಮೆಯ ಮೀರಿ ಕಾಡಿತ್ತು.
Transliteration Śīlaśīlavemba [nīliga]vārteya bēḷuve,
bālarāḷiyante āḷigoṇḍittu.
Hēḷalilla kēḷalillada vaḷāvaḷiya bariya śabda,
bayala hōraṭe!
Aṅgasukhigaḷige liṅgavillāgi,
guhēśvaranemba śīlavu sīmeya mīri kāḍittu.
Hindi Translation शील शील जैसे उपद्रवी वार्ता भ्रम
बाल समूह जैसे उपद्रव देता ,
व्यर्थ आडंबर सिर्फ श्ब्द, निःष्फल प्रयास !
लिंग न होने से अंगसुखियों को गुहेश्वर नामक
शील सीमा से परे सताता था।
Translated by: Eswara Sharma M and Govindarao B N
Tamil Translation சீலம் சீலமெனும் துன்பம் நல்கும் சொல்லின் மருள்
குழந்தைகளின் குழாமனைய துன்பம் நல்கியது
கூற, கேட்க, பொருள் புரியாத வெற்றுச் சொல்
பயனற்ற முயற்சி, உடல்பற்று உடையோர்
இலிங்கத்தையறியார், குஹேசுவரனெனும் சீலம்
எல்லையை மீறித் துன்புறுத்தியதன்றோ
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗಸುಖಿಗಳು = ಅಂಗಸುಖಂಗಳಲ್ಲಿ ಆಸಕ್ತರಾದವರು; ಆಳಿಗೊಳ್ = ಕಷ್ಟಕೊಡು; ಗಿಲಗವಾರ್ತೆ = ಕೋಟಲೆಯ ಶಬ್ದ, ಶಬ್ದಕೋಟಲೆ; ಬಯಲ ಹೋರಟೆ = ಫಲವಿಲ್ಲದ ಪ್ರಯಾಸ; ಬಾಲರಾಳಿ = ಬಾಲಸಮೂಹ; ಬೇಳುವೆ = ಭ್ರಮೆ; ವಳಾವಳಿ = ಆಡಂಬರ; ಹೇಳಕೇಳಲಿಲ್ಲದ = ಹೇಳಲೂ ಕೇಳಲೂ ಆಗದ, ಅರ್ಥವಾಗದ;
Written by: Sri Siddeswara Swamiji, Vijayapura