Index   ವಚನ - 331    Search  
 
ಧರೆಯ ಮೇಲೊಂದು ಅರಿದಪ್ಪ ರತ್ನ ಹುಟ್ಟಿರಲು, ಅದನರಸಲರಸ ಹೋಯಿತ್ತಯ್ಯಾ. ನಡುನೀರೊಳಗೆ ಮುಳುಗಿ, ಆಳವರಿದು ನೋಡಿ, ಕಂಡೆಹೆನೆಂದಡೆ ಕಾಣಬಾರದು. ಧಾರೆವಟ್ಟಲ ಕಳೆದುಕೊಂಡು ನೀರ ಶೋಧಿಸಿ ನೋಡಿದಡೆ ದೂರದಲ್ಲಿ ಕಾಣಬರುತ್ತಿಹುದು ನೋಡಾ. ಸಾರಕ್ಕೆ ಹೋಗಿ ಹಿಡಿದುಕೊಂಡೆನೆಂಬ ಧೀರರೆಲ್ಲರ ಮತಿಯ ಬಗೆಯ ನುಂಗಿತ್ತು ಗುಹೇಶ್ವರಾ.