•  
  •  
  •  
  •  
Index   ವಚನ - 330    Search  
 
ನಾಣ ಮರೆಯ ನಾಚಿಕೆ ಒಂದು ನೂಲ ಮರೆಯಲಡಗಿತ್ತು. ಬಲ್ಲೆನೆಂಬ ಅರುಹಿರಿಯರೆಲ್ಲಾ ಅಲ್ಲಿಯೇ ಮರುಳಾದರು. ನೂಲ ಮಾರಿ ಹತ್ತಿಯ ಬಿಲಿಯ ಹೋದರೆ, ಅದು ಅತ್ತಲೆ ಹೋಯಿತ್ತು ಗುಹೇಶ್ವರಾ.
Transliteration Nāṇa mareya nācike ondu nūla mareyalaḍagittu. Ballenemba aruhiriyarellā alliyē maruḷādaru. Nūla māri hattiya biliya hōdare, adu attale hōyittu guhēśvarā.
Hindi Translation नाण की आड में लज्जा सूत की आड में छिपी थी। जाने बुजुर्ग वहीं बावले बने। सूत बेचकर कपास पाने चाहे तो, वह उधर ही गया गुहेश्वरा। Translated by: Eswara Sharma M and Govindarao B N
Tamil Translation அறிவுக்கு அப்பாலொரு மெய்ப்பொருளை மோகம் காணவியலாது செய்கிறது அறிவோமெனும் பெரியோரனைவரும் மருளடைய மோகமகன்று பரம்பொருளை அடையச் சென்றால் அது அதனுடனேயே ஒன்றியது குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅತ್ತಲೆ ಹೋಯಿತ್ತು = ಪರಮ ಆತ್ಮನಲ್ಲಿಯೆ ಮರೆಯಾಗಿಹೋಯಿತ್ತು ; ಅದು = ಆ ಪರಮ ಆತ್ಮನನ್ನು ಶೋಧಿಸಲು ಹೊರಟ ಮತಿ, ಜೀವಾತ್ಮ; ನಾಚಿಕೆ = ಗುಪ್ತವಾದ ಸತ್ಯ, ದೇವ; ನಾಣ = ಬುದ್ದಿ; ನೂಲ ಮಾರು = ವಸ್ತುವಿನ ಹೊರರೂಪಿನ ಮೋಹ ತ್ಯಜಿಸು; ನೂಲು = ಹೊರಾವರಣದ ಮೋಹ, ವಿಷಯವ್ಯಾಮೋಹ, ಭೌತವಸ್ತುವಿನ ಆಕರ್ಷಣೆ; ಬಿಲಿಯಹೋಗು = ಪಡೆಯಹೋಗು; ಹತ್ತಿ = ಮೂಲ ವಸ್ತು, ಪರಮ ಆತ್ಮ; Written by: Sri Siddeswara Swamiji, Vijayapura