•  
  •  
  •  
  •  
Index   ವಚನ - 359    Search  
 
ಆಕಾರ ನಿರಾಕಾರವೆಂಬೆರಡೂ ಸ್ವರೂಪು ನಿರೂಪಂಗಳು. ಒಂದು ಆಹ್ವಾನ, ಒಂದು ವಿಸರ್ಜನ, ಒಂದು ವ್ಯಾಕುಳ, ಒಂದು ನಿರಾಕುಳ. ಉಭಯಕುಳರಹಿತ ಗುಹೇಶ್ವರಾ, ನಿಮ್ಮ ಶರಣ ನಿಶ್ಚಿಂತನು.
Transliteration Ākāra nirākāravemberaḍū svarūpu nirūpaṅgaḷu. Ondu āhvāna, ondu visarjana, ondu vyākuḷa, ondu nirākuḷa. Ubhayakuḷarahita guhēśvarā, nim'ma śaraṇa niśvintanu.
Hindi Translation आकार निराकार जैसे दो स्वरूप हैं: एक आह्वान, एक विसर्जन। एक व्याकुल, एक निराकुल! उभयकुल रहित, गुहेश्वरा, तुम्हारा शरण निश्चिंत है। Translated by: Eswara Sharma M and Govindarao B N
Tamil Translation வடிவம், வடிவமற்றதென இரு சொரூபங்கள் ஒன்று அழைப்பது, ஒன்று அதன் இறுதி ஒன்று உறுப்புடையது, ஒன்று உறுப்பற்றது இரண்டினையும் மீறியது, குஹேசுவரனே உம் சரணன் பேரமைதியுடையவனன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಕಾರ = ಸಾಕಾರ, ದೃಷ್ಟಿಗೋಚರ; ಆಹ್ವಾನ = ಆಹ್ವಾನಾದಿ ಉಪಚಾರಗಳು,; ನಿರಾಕಾರ = ಅದೃಶ್ಯ, ಕೇವಲ ಮನೋಗಮ್ಯ; ನಿರಾಕುಳ = ನಿಷ್ಕಲ, ಸ್ಥಲರಹಿತ, ನಿರವಯವ; ವಿಸರ್ಜನ = ಆ ಎಲ್ಲ ಉಪಚಾರಗಳ ವಿಸರ್ಜನೆ, ಕೊನೆ; ವ್ಯಾಕುಳ = ಸಕಲ, ಕಲಾಸಹಿತ, ಸಾವಯವ; ಸ್ವರೂಪ = ಪರವಸ್ತುವಿನವೇ ಆದ ಅಭಿವ್ಯಕ್ತ ರೂಹು; Written by: Sri Siddeswara Swamiji, Vijayapura

C-360 

  Thu 31 Aug 2023  

 `ನಿಶ್ವಿಂತ` ಎಂಬ ಶಬ್ದ ಇಲ್ಲ. `ನಿಶ್ಚಿಂತ` ಇರಬೇಕು. ಪರಿಶೀಲಿಸಿ.
  ಸಿದ್ಧೇಶ್ವರಪ್ಪ ಎಚ್ ಎಸ್