•  
  •  
  •  
  •  
Index   ವಚನ - 372    Search  
 
ತನ್ನನರಿದ ಅರಿವೆಂತುಟೊ? ತನ್ನ ಮರೆದ ಮರಹೆಂತುಟೊ? ಅರಿದು ಮರೆದವರು ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ ಗುಹೇಶ್ವರಾ.
Transliteration Tannanarida ariventuṭo? Tanna mareda marahentuṭo? Aridu maredavaru nim'ma pratibimbadantipparu kāṇā guhēśvarā.
Hindi Translation अपने आपको जाना ज्ञान कैसा है ? अपने आपकी भूल कैसी है ? समझकर भूले तुम्हारे प्रतिबिंब जैसे हैं देखो, गुहेश्वरा Translated by: Eswara Sharma M and Govindarao B N
Tamil Translation தன்னையறிந்த அறிவு எத்தகையது? தன்னை மறந்த மறதி எத்தகையது? அறிந்து மறந்தவர் உம் பிரதிபிம்பமனைய இருப்பர் காணாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿದ ಅರಿವು = ನಿಜಸ್ವರೂಪವನು ಅರಿತ ಅರಿವು; ಅರಿದು ಮರೆದವರು = ಆತ್ಮವನು ಅರಿತು ಅನಾತ್ಮವನು ಮರೆತವರು; ಎಂತುಟೊ? = ಎಂಥದು?; ತನ್ನ = ಜೀವಾತ್ಮನ; ಮರೆದ ಮರುಹು = ನಿಜಸ್ವರೂಪವನು ಮರೆತ ಮರಹು; Written by: Sri Siddeswara Swamiji, Vijayapura