ಮಾಯಾಮಲಿನ ಮನದಿಂದಗಲದೆ,
ಕಾಯದ ದಂದುಗ ಕಳೆಯಿಂದಗಲದೆ,
ಅರಿವು ಬರಿದೆ ಬಪ್ಪುದೆ? ನಿಜವು ಬರಿದೆ ಸಾಧ್ಯವಪ್ಪುದೆ?
ಮರುಳೆ, ಗುಹೇಶ್ವರಲಿಂಗವನರಿಯ ಬಲ್ಲಡೆ,
ನಿನ್ನ ನೀ ತಿಳಿದು ನೋಡಾ.
Transliteration Māyāmalina manadindagalade,
kāyada danduga kaḷeyindagalade,
arivu baride bappude? Nijavu baride sādhyavappude?
Maruḷe, guhēśvaraliṅgavanariya ballaḍe,
ninna nī tiḷidu nōḍā.
Hindi Translation माया मलिन मन से दूर हुए बिना,
शरीर का मोह दूर हुए बिना ,
क्या ज्ञान आसानी से मिलता है ?
क्या ज्ञान बिना मेहनत से मिलता है?
गुहेश्वर लिंग जानना हो तो
तुम तुझे जानकर देखो !
Translated by: Eswara Sharma M and Govindarao B N
Tamil Translation மாயையெனும் மாசு மனத்திலிருந்தகலாமல்
உடல் சார்ந்த எண்ணம் அவனிடமிருந்தகலாமல்
அறிவு தானாக வந்து விடுமோ?
உண்மை தானாக வருமோ மருளே?
குஹேசுவரலிங்கத்தை அறியவியன்றால்
உன்னை நீ ஆராய்ந்து காணாய்?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿವು = ಜಡವಾದ ದೇಹವು ತಾನಲ್ಲ, ಅಜಡ ಅಮೃತ ಚೈತನ್ಯವೇ ತಾನು ಎಂಬ ತಿಳಿವು; ಕಳೆ = ಜೀವ, ಜೀವಾತ್ಮನು; ಕಾಯದ ದಂದುಗ = ದೇಹಸಂಬಂಧಿತ ಚಿಂತೆ-ಭ್ರಾಂತಿ, ವ್ಯಥೆ-ವ್ಯಸನ, ಕ್ಲೇಶ-ದುಃಖ; ನಿಜವು = ತಾನು ಬರಿ ಅರಿವು, ಆನಂದರೂಪ; ಆದ್ಯಂತಗಳಿಲ್ಲದ ಅಸ್ತಿತ್ವ; ದೇಹಾದಿ ಯಾವ ಪರಿಮಿತಿಗಳಿಗೂ ಒಳಪಡದ ನಿಸ್ಸೀಮ ಚೇತನ ಎಂಬ ಅರಿ; ಬರಿದೆ = ಷಡುಸ್ಥಲ ಸಾಧನೆಯಿಲ್ಲದೆ; ಮಾಯಾಮಲಿನ = ಮಾಯೆ ಎಂಬ ಮಾಲಿನ್ಯ, ಪ್ರಾಪಂಚಿಕ ವ್ಯಾಮೋಹ; ಸಾಧ್ಯವಪ್ಪುದೆ? = ಅನುಭವಕ್ಕೆ ಬರುವುದೆ?;
Written by: Sri Siddeswara Swamiji, Vijayapura