ಭವಿಯ ಕಳೆದೆವೆಂಬ ಮರುಳು ಜನಂಗಳು ನೀವು ಕೇಳಿರೆ;
ಭವಿಯಲ್ಲವೆ ನಿಮ್ಮ ತನುಗುಣಾದಿಗಳು?
ಭವಿಯಲ್ಲವೆ ನಿಮ್ಮ ಮನಗುಣಾದಿಗಳು?
ಭವಿಯಲ್ಲವೆ ನಿಮ್ಮ ಪ್ರಾಣಗುಣಾದಿಗಳು?
ಇವರೆಲ್ಲರೂ ಭವಿಯ ಹಿಡಿದು ಭವಭಾರಿಗಳಾದರು.
ನಾನು ಭವಿಯ ಪೂಜಿಸಿ ಭವಂನಾಸ್ತಿಯಾದೆನು ಗುಹೇಶ್ವರಾ.
Hindi Translationभवी मुक्त कहनेवाले पागल तुम सुनो।
तुम्हारे तनुगुण आदि भवि नहीं?
तुम्हारे मनगुणादि भवि नहीं ?
तुम्हारे प्राण गुणादि भवि नहीं ?
यह सब भवि अपनाकर भवभारी बने।
मैं भवि की पूजाकर भवनास्ति हुआ गुहेश्वरा।
Translated by: Eswara Sharma M and Govindarao B N
English Translation
Tamil Translationநியமமற்ற தன்மையைக் களைந்தோம் என
இயம்பும் மருண்ட மனிதர்களே, நீவிர் கேண்மின்
உடல் சார்ந்த இயல்புகள் நியமமோ?
மனம் சார்ந்த இயல்புகள் நியமமோ?
பிராணன் சார்ந்த இயல்புகள் நியமமோ?
இவர்களனைவரும் மனக்கலக்கத்தால்
பிறவிப் பிணைப்பில் கட்டுண்டனர்
நான் சிவனைப் பூஜித்து, பிறவிச்
சுழலிலிருந்து விடுபட்டேன் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಇವರೆಲ್ಲರು = ಲಿಂಗಧಾರಣೆಯ ಮೂಲಕ ಬರಿ ಹೊರಗಿನ ಭವಿತನವ ಕಳೆದು ಕೊಂಡವರು; ಕಳೆದುಕೊಳ್ = ಲಿಂಗವನು ಧರಿಸಿ ಆ ಭವಿತನವನ್ನು ನೀಗುವುದು; ತನುಗುಣ = ವೃದ್ದಿ-ಕ್ಷಯ ಎಂಬ ತನುವಿಕಾರಗಳು; ನಾನು = ಶರಣನಾದ ನಾನು; ಪೂಜಿಸಿ = ಮನೋಗತ ಎಲ್ಲ ವಿಕಾರಗಳನ್ನು ಶಾಂತಗೊಳಿಸಿ, ಆ ಲಿಂಗವೆ ತಾನೆಂದು ಅನುಸಂಧಾನಿಸಿ; ಪ್ರಾಣಗುಣ = ಹಸಿವು-ತೃಷೆ ಎಂಬ ಪ್ರಾಣವಿಕಾರಗಳು; ಭವಂ ನಾಸ್ತಿಯಾದೆನು = ಭವಮುಕ್ತನಾದೆನು; ಭವಭಾರಿಗಳಾದರು = ಭವದ ಬಂಧನಕ್ಕೆ ಈಡಾದರು; ಭವಿ = ಭವಿತನ, ಲಿಂಗವಿಲ್ಲದಿರುವ ಸ್ಥಿತಿ ; ಭವಿ = ಜನ್ಮ-ಮರಣ ಎಂಬ ಭವಕ್ಕೆ ಕಾರಣವಾದುದು; ಭವಿ = ಶಿವ, ಭವವೆಂಬ ಜೀವನಪ್ರವಾಹವೆ ಪ್ರಾರಂಭವಾಗದ ಮೊದಲಿರುವ ಆದಿತತ್ವ್ತ,ಮಹಾಲಿಂಗ ; ಭವಿಗಳ ಹಿಡಿದು = ಅಂತರಂಗದ ಭವಿಗಳಾದ ಮನೋವಿಕಾರಗಳಿಗೆ ಒಳಗಾಗಿ ; ಮನಗುಣ = ಸಂಕಲ್ಪ-ವಿಕಲ್ಪ ಎಂಬ ಮನೋವಿಕಾರಗಳು; Written by: Sri Siddeswara Swamiji, Vijayapura