•  
  •  
  •  
  •  
Index   ವಚನ - 387    Search  
 
ಬಿಸಿಲೆಂಬ ಗುರುವಿಂಗೆ ನೆಳಲೆಂಬ ಶಿಷ್ಯ. ನಿರಾಳಲಿಂಗಕ್ಕೆ ಬಯಲೆ ಸೆಜ್ಜೆ, ವಾಯುವೆ ಶಿವದಾರ, ಬೆಳಗೆ ಸಿಂಹಾಸನ. ಅತ್ತಲಿತ್ತ ಚಿತ್ತವ ಹರಿಯಲೀಯದೆ, ಮಜ್ಜನಕ್ಕೆರೆದು ಸುಖಿಯಾದೆ ಗುಹೇಶ್ವರಾ.
Transliteration Bisilemba guruviṅge neḷalemba śiṣya. Nirāḷaliṅgakke bayale sejje, vāyuve śivadāra, beḷage sinhāsana. Attalitta cittava hariyalīyade, majjanakkeredu sukhiyāde guhēśvarā.
Music Courtesy:
Hindi Translation धूप जैसे गुरु को छाया जैसे शिष्य। शुद्ध चैतन्य को शून्य ही करंडक, वायु ही शिवदार, प्रकाश ही सिंहासन। इधर उधर चित्त भटकना न दिये, स्नान करवाकर सुखी बना गुहेश्वरा। Translated by: Eswara Sharma M and Govindarao B N
Tamil Translation வெயில் எனும் குருவிற்கு நிழல் எனும் சீடன் தூயலிங்கத்திற்கு வயலே பேழை, வாயுவே நூலாகும் ஒளியே பீடமாகும். அங்குமிங்கும் மனத்தைச் செலுத்தாமல் திருமஞ்சனம் செய்து இன்பமுற்றேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಗುರು = ಆತ್ಮಾನುಭೂತಿಗೆ ಸಾಧನವಾದ ಶಿವಯೋಗಪಥವನು ಹರಹುವನು; ನಿರಾಳಲಿಂಗ = ಅತ್ಯಂತ ಶುದ್ದವಾದ ಚ್ಯೆತನ್ಯವು, ಯಾವ ಆಕಾರವೂ ಇಲ್ಲದ ಅಸ್ತಿತ್ವಮಾತ್ರವಾದ ಭಾವಲಿಂಗ , ಜ್ನಾನಲಿಂಗ; ನೆಳಲೆಂಬ = ಪ್ರಶಾಂತಚಿತ್ತದ, ಶಮದಮಾದಿ ಸದ್ಗುಣಸಂಪನ್ನನಾದ; ಬಯಲು = ಏನೂ ಏನೂ ಇಲ್ಲದ ಬಟ್ಟಬಯಲು, ಅಂತರಾಕಾಶ; ಬಿಸಿಲೆಂಬ = ಆತ್ಮಾನುಭೂತಿಯುಳ್ಲ ಸ್ವರೂಪಜ್ನಾನವುಳ್ಳ; ಬೆಳಗು = ಸದ್ಭಾವ; ಮಜ್ಜನಕ್ಕೆರೆ = ಅನುಸಂಧಾನಗೈ; ವಾಯು = ಅತಿಸೂಕ್ಷ್ಮವಾದ ಪ್ರಾಣಶಕ್ತಿ; ಶಿವದಾರ = ಆ ಕರಡಿಗೆಗೆ ಕಟ್ಟಲಾದ ದಾರ; ಶಿಷ್ಯ = ಸಾಧಕ, ಶ್ರೀಗುರುವಿನಿಂದ ಶಿವಯೋಗಪಥವನು ಅರಿತು ಆತ್ಮ ಸಾಕ್ಷಾತ್ಕಾರ ಹೊಂದಲೆಳಸುವವ.; ಸಿಂಹಾಸನ = ಪೀಠ; ಸೆಜ್ಜೆ = ಕರಡಿಗೆ; Written by: Sri Siddeswara Swamiji, Vijayapura