ಪೃಥ್ವಿ ಜಡನೆಂದರಿದವಂಗೆ ಸ್ಥಾವರಾದಿಗಳಲ್ಲಿ ಎರಗಲೇಕಯ್ಯಾ?
ಅಪ್ಪು ಜಡನೆಂದರಿದವಂಗೆ ತೀರ್ಥಸ್ನಾನಂಗಳಲ್ಲಿ ಅತಿಶಯವೇಕಯ್ಯಾ?
ತೇಜ ಜಡನೆಂದರಿದವಂಗೆ ಹೋಮ ಸಮಾಧಿಗಳೇಕಯ್ಯಾ?
ವಾಯು ಜಡನೆಂದರಿದವಂಗೆ ಧ್ಯಾನ ಮೌನಂಗಳ ಹಿಡಿಯಲೇಕಯ್ಯಾ?
ಆಕಾಶ ಜಡನೆಂದರಿದವಂಗೆ ಮಂತ್ರರೂಢಿ ಏಕಯ್ಯಾ?
ಇನಿತೂ ಜಡನೆಂದರಿದವಂಗೆ ವಿಧಿ ಕಿಂಕರತೆ ಇಲ್ಲವಯ್ಯಾ?
ಗುಹೇಶ್ವರನ ನಿಜವು ಇದು ತಾನೆಂದರಿದ ಮಹಾತ್ಮಂಗೆ.
Transliteration Pr̥thvi jaḍanendaridavaṅge sthāvarādigaḷalli eragalēkayyā?
Appu jaḍanendaridavaṅge tīrthasnānaṅgaḷalli atiśayavēkayyā?
Tēja jaḍanendaridavaṅge hōma samādhigaḷēkayyā?
Vāyu jaḍanendaridavaṅge dhyāna maunaṅgaḷa hiḍiyalēkayyā?
Ākāśa jaḍanendaridavaṅge mantrarūḍhi ēkayyā?
Initū jaḍanendaridavaṅge vidhi kiṅkarate illavayyā?
Guhēśvarana nijavu idu tānendarida mahātmaṅge.
Hindi Translation पॄथ्वि को जड समझनेवाले को स्थावरादियों में झुकना क्यों?
जल को जड समझनेवाले को तीर्थ स्थानों में अतिशय क्यों?
तेज को जड समझनेवाले को होम समाधि क्यों ?
वायु को जड समझनेवाले को ध्यान मौन धारण करना क्यों ?
आकाश को जड समझनेवाले को मंत्रा रूढी क्यों ?
इतनों को जड समझनेवाले को विधि नियम क्यों,
गुहेश्वर का निज स्थिति यह खुद समझे महात्म को!
Translated by: Eswara Sharma M and Govindarao B N
Tamil Translation பூமி ஜடமென அறிந்தவன் நிலைத்த வடிவத்தை வணங்குவதேனோ?
நீர் ஜடமென அறிந்தவன் புனித நதிகளில் நீராடுவதில் என்ன சிறப்புளதோ?
தீ ஜடமென அறிந்தவன் ஹோமம், மௌனத்தை மேற்கொள்வதேனோ?
வாயு ஜடமென அறிந்தவன் தியான, மோனத்தைச் செய்வது எதற்கோ?
ஆகாயம் ஜடமென அறிந்தவன் மந்திரங்களை உச்சரிப்பது எதற்கோ?
இவ்விதம் ஜடமென அறிந்தவனுக்கு விதி நியமங்களில்லை ஐயனே
குஹேசுவரனெனும் மெய்ப்பொருள் தானென்றறிந்த ஞானிக்கு ஐயனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅತಿಶಯ = ವಿಶೇಷತೆ; ಎರಗು = ತಲೆಬಾಗು, ಆದರತೋರು, ಅರ್ಚಿಸು; ಜಡ = ಅಚೇತನ, ಜ್ಞಾನಾಂಶವಿಲ್ಲದ ಅನಾತ್ಮವಸ್ತು; ಧ್ಯಾನಾರೂಢಿ = ಧ್ಯಾನಸಾಧನೆ; ಯಂತ್ರಾದಿಗಳು = ಯಂತ್ರ-ಮಂತ್ರಗಳು, ದೇವತೆಗಳನ್ನು ಸಂಕೇತಿಸುವ ವಿಶಿಷ್ಟ ರೇಖಾಕೃತಿಗಳು ಯಂತ್ರ; ವಿಧಿ ಕಿಂಕರತೆ = ವಿಧಿ ನಿಯಮಗಳಿಗೆ ಒಳಗಾಗುವಿಕೆ;
Written by: Sri Siddeswara Swamiji, Vijayapura