ಕಾಯ ಭಿನ್ನವಾಯಿತ್ತೆಂದು ಮುಟ್ಟಿಸುವರು ಲಿಂಗವನು.
ಮುಟ್ಟಲಾಗದು ಲಿಂಗವನು; ಮುಟ್ಟಿದಾತ ಮುಂದೆ ಹೋದ.
ಮುನ್ನ ಮುಟ್ಟಿದವರೆಲ್ಲ ಉಪಜೀವಿಗಳಾದರು.
ಇನ್ನು ಮುಟ್ಟಿದವರಿಗೆ ಗತಿಯುಂಟೆ ಗುಹೇಶ್ವರಾ?
Transliteration Kāya bhinnavāyittendu muṭṭisuvaru liṅgavanu.
Muṭṭalāgadu liṅgavanu; muṭṭidāta munde hōda.
Munna muṭṭidavarella upajīvigaḷādaru.
Innu muṭṭidavarige gatiyuṇṭe guhēśvarā?
Hindi Translation शरीर भिन्न हुआ समझ्कर लिंग धारण करते हैं।
लिंग को मत स्पर्श करना; स्पर्श किया आगे बडा।
पहले धारण किये हुए उपजीवी बन गये।
आगे धारण करनेवालों की क्या गती है गुहेश्वरा?
Translated by: Eswara Sharma M and Govindarao B N
Tamil Translation உடலுணர்வு அகல, இலிங்கத்தை அருள்வர்
இலிங்க வழியில் செல்ல வியலுமோ?
சென்றவன், இலிங்கத்தை யுணர்ந்தனன்
முன்பு சாதனை செய்தோர் வாழ்வு இலிங்கமயமாயிற்று
இனி செல்வோருக்கு பிறவி உண்டோ, குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಇನ್ನು = ಈಗ ಹಾಗೂ ಮುಂದೆ; ಉಂಟೆ? = ಇರಲು ಸಾಧ್ಯವೆ?; ಉಪಜೀವಿಗಳಾದರು = ಲಿಂಗಾಶ್ರಿತ ಬದುಕ ನಡೆಸಿದರು, ತಮ್ಮ ಬದುಕನ್ನೆಲ್ಲ ಲಿಂಗಮಯಗೊಳಿಸಿದರು; ಕಾಯ ಭಿನ್ನವಾಯಿತೆಂದು = ಕಾಯದ ಭಾವವು ಅಳಿಯಲಿ ಎಂದು, ಜೀವಭಾವವು ಇಲ್ಲದಾಗಲಿ ಎಂದು; ಗತಿ = ಭವಗತಿ; ಮುಂದೆ ಹೋದ = ಲಿಂಗಾಂಗಸಾಮರಸ್ಯದ ಸ್ಥಿತಿಯ ತಲುಪಿದ; ಮುಟ್ಟಿದವರಿಗೆ = ಲಿಂಗಪಥಗಾಮಿಗಳಿಗೆ; ಮುಟ್ಟಿದವರೆಲ್ಲ = ಲಿಂಗ ಸ್ವೀಕರಿಸಿ ಸಾಧನೆ ಮಾಡಿದವರೆಲ್ಲ; ಮುಟ್ಟಿದಾತ = ಲಿಂಗವನು ಮುಟ್ಟಿದವನು, ಲಿಂಗಮಾರ್ಗದಲ್ಲಿ ಕ್ರಮಿಸಿದವನು; ಮುಟ್ಟಿಸುವರು = ಅನುಭವಿಗಳು ಕರುಣಿಸುವರು; ಮುನ್ನ = ಹಿಂದಿನ ಕಾಲದಲ್ಲಿ; ಲಿಂಗವ ಮುಟ್ಟಲು ಆಗದು = ಲಿಂಗವನು ಮುಟ್ಟಲು ಸಾಧ್ಯ ಆಗದು, ಲಿಂಗಪಥದಿ ನಡೆಯಲು ಆಗದು, ಮಹಾಲಿಂಗದಲ್ಲಿ ಒಂದಾಗಲು ಸಾಧ್ಯ ಆಗದು; ಲಿಂಗವನು = ಇಷ್ಟಲಿಂಗವನ್ನು, ಲಿಂಗಜ್ಞಾನವನ್ನು, ಲಿಂಗಾಂಗ ಸಾಮರಸ್ಯದ ರಹಸ್ಯಜ್ಞಾನವನ್ನು;
Written by: Sri Siddeswara Swamiji, Vijayapura