ವಚನ - 405     
 
ಲೋಕದ ನಚ್ಚು ಮಚ್ಚು ಬಿಟ್ಟು ನಿಶ್ಚಿಂತವಾಯಿತ್ತು. ಏನು ಹತ್ತಿತ್ತೆಂದರಿಯೆನಯ್ಯಾ. ಏನು ಹೊದ್ದಿತ್ತೆಂದರಿಯೆನಯ್ಯಾ. ಗುಹೇಶ್ವರನೆಂಬ ಗ್ರಹ ಒಳಕೊಂಡಿತ್ತಾಗಿ ನಾನೇನೆಂದರಿಯೆನಯ್ಯಾ.