•  
  •  
  •  
  •  
Index   ವಚನ - 406    Search  
 
ಧರೆಯ ಮೇಲಣ ಜನಿತಕ್ಕೆ ಉರಗನ ಅಧರಪಾನ. ನಖಕಂಕಣ ಮುಖ ಮೂವತ್ತೊಂದು ಶಿರವ ನುಂಗಿತ್ತು ನೋಡಾ! ಉತ್ತರಾಪಥದ ಕೊಡಗೂಸು ಈಶಾನ್ಯದ ಒಡಲೊಳಗೆ ಅಡಗಿ, ಸಾಕಾರದ ಸಂಗವ ನುಂಗಿದ ಭಾಷೆಯನರಿಯದ ಮುಗ್ಧೆ! ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು ಗುಹೇಶ್ವರಲಿಂಗವು ತ್ರಿಕಾಲ ಪೂಜೆಯ ನುಂಗಿತ್ತು.
Transliteration Dhareya mēlaṇa janitakke uragana adharapāna. Nakhakaṅkaṇa mukha mūvattondu śirava nuṅgittu nōḍā! Uttarāpathada koḍagūsu īśān'yada oḍaloḷage aḍagi, sākārada saṅgava nuṅgida bhāṣeyanariyada mugdhe! Arivinoḷagaṇa marahu, marahinoḷagaṇa arivu guhēśvaraliṅgavu trikāla pūjeya nuṅgittu.
Hindi Translation धरती पर जन्म लेनेसे सर्प का अमृतपान। नख कंकण मुँह इकत्तीस सिर निगला था! उत्तर मार्ग की शिशु ईशान्य के पेट मॆं समा होकर साकार संग निगला भाषा न जाना मुग्धा! ज्ञान के अंदर का अज्ञान, अज्ञान के अंदर का ज्ञान! गुहेश्वर नामक लिंग त्रिकाल पूजा को निगला था। Translated by: Eswara Sharma M and Govindarao B N
Tamil Translation பூமியின் மீது தோன்றிய பாம்பின் அமுதபானமானது நகம், கங்கணம், முகமெனும் முப்பத்தொரு தலையை விழுங்கியது காணாய் - வடக்கிலுள்ள கன்னிகை ஈசானியனுடன் இணைந்து, உணர்வுகளின் இணைவை அகற்றிய, மொழியறியா தூய உணர்வு அறிவிலுள்ள மறதி, மறதியிலுள்ள அறிவு குஹேசுவரனெனும் இலிங்கம் முக்கால பூஜையை விழுங்கியது. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಡಗಿ = ಬೆರೆತು; ಅಧರಪಾನ = ಅಮೃತಪಾನ; ಅರಿವು = ಬರಿ ಅರಿವಿನ ರೂಪನಾದ ಪರಶಿವ; ಈಶಾನ್ಯದ ಒಡಲೊಳಗೆ = ಪರಶಿವನಲ್ಲಿ; ಉತ್ತರಪಥದ = ತ್ರಿಕೂಟದಾಚೆಯ ಬ್ರಹ್ಮಮಂಡಲದಲ್ಲಿ ಉದಿಸಿದ; ಉರಗ = ಕುಂಡಲಿನಿ; ಕೊಡಗೂಸು = ಶಿವೋsಹಂಜ್ಞಾನ, ಶಿವಜ್ಞಾನ; ಜನಿತ = ಉತ್ಪತ್ತಿಯಾದ; ತ್ರಿಕಾಲಪೂಜೆ = ಕಾಲಖಂಡಿತವಾದ ಪೂಜೆ; ಧರೆ = ಭೌತಿಕ ವಿಶ್ವ, ಅದರಲ್ಲಿ ರಚನೆಗೊಂಡ ದೇಹ; ನಖ, ಕಂಕಣ, ಮುಖ, ಶಿರ = ನಖದಿಂದ ಶಿರದವರೆಗಿರುವ ಸಮಗ್ರ ದೇಹ, ಮೂವತ್ತೊಂದು ತತ್ವ್ತಗಳಿಂದಾದ ಸಮಗ್ರ ಪ್ರಕೃತಿ; ನುಂಗಿತ್ತು = ಉನ್ಮಾದಗೊಳಿಸುವ ಆ ಆನಂದಾನುಭವವು ಈ ಪ್ರಕೃತಿಭಾವನೆಯನ್ನು ಅಡಗಿಸಿತ್ತು.; ಭಾಷೆಯನರಿಯದ = ವರ್ಣ, ಪದ, ಮಂತ್ರಗಳಿಂದಾದ ಸಮಸ್ತ ಭಾಷಾ ಪ್ರಪಂಚವನು ಮೌನಗೊಳಿಸಿದ; ಮರಹು = ತನ್ನ ನಿಜಸ್ವರೂಪವನು ಮರೆತಿರ್ದ ಜೀವ; ಮುಗುದೆ = ಪರಿಶುದ್ದ ಪ್ರಜ್ಞೆ-ಅದು; ಸಾಕಾರದ ಸಂಗವ ನುಂಗಿದ = ಆತ್ಮಭಿನ್ನವಾದ ಅನಾತ್ಮ ಭಾವನೆಗಳನೆಲ್ಲವ ನುಂಗಿಹಾಕಿದ; Written by: Sri Siddeswara Swamiji, Vijayapura