ಲೋಕದ ನಚ್ಚು ಮಚ್ಚು ಬಿಟ್ಟು ನಿಶ್ಚಿಂತವಾಯಿತ್ತು.
ಏನು ಹತ್ತಿತ್ತೆಂದರಿಯೆನಯ್ಯಾ.
ಏನು ಹೊದ್ದಿತ್ತೆಂದರಿಯೆನಯ್ಯಾ.
ಗುಹೇಶ್ವರನೆಂಬ ಗ್ರಹ ಒಳಕೊಂಡಿತ್ತಾಗಿ
ನಾನೇನೆಂದರಿಯೆನಯ್ಯಾ.
Transliteration Lōkada naccu maccu biṭṭu niścintavāyittu.
Ēnu hattittendariyenayyā.
Ēnu hoddittendariyenayyā.
Guhēśvaranemba graha oḷakoṇḍittāgi
nānēnendariyenayyā.
Hindi Translation लोक व्यामोह छोडकर निश्चिंत हुआ था।
क्या लगा नहीं जानता!
क्या ऒडागया नहीं जानता!
गुहेश्वर जैसे ग्रह छाने के कारण
मैं नहीं जानता मैं कौन, क्या हूँ।
Translated by: Eswara Sharma M and Govindarao B N
Tamil Translation உலகப்பற்றகன்று மனம் அமைதியுற்றது
எது பீடித்ததென அறியேனையனே!
எது சூழ்ந்ததென அறியேனையனே!
குஹேசுவரனெனும் கிரகம் என்னையுட்கொண்டதனை
நான் என்ன என்று அறியேனையனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಎಂದರಿಯೆನಯ್ಯಾ = ಎಂಬುದನ್ನು ತಿಳಿಯೆ; ಏನು ಹತ್ತಿತ್ತು? = ಏನು ಆಕ್ರಮಿಸಿತ್ತು?; ಏನು ಹೊದ್ದಿತ್ತು? = ಏನು ಆವರಿಸಿತ್ತು?; ಒಳಕೊಂಡಿತ್ತಾಗಿ = ಆವಿಷ್ಟವಾದುದರಿಂದ, ಪ್ರವೇಶವಾದುದರಿಂದ; ಗುಹೇಶ್ವರನೆಂಬ ಗ್ರಹ = ಪರಮಾತ್ಮನೇ ಗ್ರಹ-ಮಹಾಭೂತ; ನಚ್ಚುಮಚ್ಚು = ವ್ಯಾಮೋಹ; ನಾನು ಏನೆಂದರಿಯೆನಯ್ಯ = ಆ ಗುಹೇಶ್ವರನಿಗೆ ಭಿನ್ನವಾಗಿ 'ನಾನು ಏನು', 'ಯಾರು' ಎಂಬುದನ್ನು ಅರಿಯೆನು; ನಿಶ್ಚಿಂತವಾಯಿತ್ತು = ಮನಸ್ಸು ಶಾಂತವಾಯಿತ್ತು; ಬಿಟ್ಟು = ಹರಿದು; ಲೋಕದ = ಲೋಕವಿಷಯಕ;
Written by: Sri Siddeswara Swamiji, Vijayapura