ಊರಕ್ಕಿ ಊರೆಣ್ಣೆ ಉಣ್ಣು ಮಾರಿಕವ್ವ ತಾಯೆ,
ಬಾರೆ ಕುಮಾರನ ತಲೆಗಾಯಿ ಎಂಬಂತೆ;
ಕಾಡ ಹೂ ಕೈಯ ಲಿಂಗವ
ಪೂಜಿಸುವಾತನ ಭಕ್ತನೆಂಬರು, ಅಲ್ಲ.
ತಾನು ಲಿಂಗ ತನ್ನ ಮನವೆ ಪುಷ್ಪ.
ಪೂಜೆಯ ಪೂಜಿಸುವಾತನೆ ಸದ್ಭಕ್ತನು ಗುಹೇಶ್ವರಾ.
Hindi Translationगाँव के चावल, गाँवका तेल मारी माँ स्वीकार करो।
आओ बच्चे की रक्षा करो जैसे!
जंगल का पुष्प लाकर हाथ के लिंग की पूजनेवाला भक्त है, नहीं।
खुद लिंग, मन ही पुष्प समझकर।
पूजा करनेवाला ही सद्भक्त है गुहेश्वरा!
Translated by: Eswara Sharma M and Govindarao B N
Tamil Translationஊரிலுள்ளோர் அளித்த அரிசி, எண்ணெயை
ஏற்பாய் மாரியம்மனே, தாயே
வருவாய், மகனைக் காப்பாய் என்பதனைய!
காட்டுமலரால் கையிலுள்ள இலிங்கத்தைப்
பூஜித்தவனை பக்தன் என்பர், அல்ல!
தான் இலிங்கம், தன் மனமே மலர்
பூஜிக்கும் அவனே நல்ல பக்தனாவான் குஹேசுவரனே!
Translated by: Smt. Kalyani Venkataraman, Chennai
ಶಬ್ದಾರ್ಥಗಳುಅಲ್ಲ = ನಿಜವಾಗಿಯೂ ಆತ ಭಕ್ತ ಅಲ್ಲ; ಉಣ್ಣು = ಸ್ವೀಕರಿಸು, ಹರಿಸು; ಊರಕ್ಕಿ = ಊರವರು ಇಕ್ಕಿದ ಅಕ್ಕಿ; ಊರೆಣ್ಣೆ = ಊರವರು ಸುರಿದ ಎಣ್ಣೆ; ಎಂಬಂತೆ = ಆ ಮಾರಿಕಾದೇವಿಯನ್ನು ಪೂಜಿಸುವಂತೆಯೆ; ಕಾಡ ಹೂ = ಕಾಡಿನೊಳಗೆ ಬೆಳೆದ ಹೂ; ಕುಮಾರನ ತಲೆಗಾಯಿ = ಮಗುವನ್ನು ಕಾಪಾಡು; ಕೈಯ ಲಿಂಗ = ಕರಸ್ಥಲದ ಲಿಂಗ; ತನ್ನ ಮನವೆ ಪುಷ್ಪ = ತನ್ನ ನಿರ್ಮಲವಾದ, ಅಂತರ್ಮುಖಿಯಾದ ಮಸಸ್ಸೆ ಪುಷ್ಪ; ತಾನು ಲಿಂಗ = ಪೂಜಿಸುವ ತಾನೆ ಲಿಂಗ, ತನ್ನ ಆತ್ಮವೆ ಲಿಂಗ; ಪೂಜಿಸಿದವನ = ಪೂಜೆ ಮಾಡಿದವನ; ಪೂಜೆಯ ಮಾಡುವಾತನೆ = ಆತ್ಮಲಿಂಗದಲ್ಲಿ ಮನೋಪುಷ್ಪವನು ಅರ್ಪಿಸಿ, ಆತ್ಮಧ್ಯಾನದಲಿ ಮನವ ನಿಯೋಗಿಸಿ ಅನುಸಂಧಾನಿಸುವಾತನೆ; ಬಾರೆ = ಬರುವಂಥವಳಾಗು, ನಮ್ಮ ಭಕ್ತಿಯನು ಸ್ವೀಕರಿಸಲು; ಭಕ್ತನೆಂಬರು = ಈತ ಭಕ್ತ-ಎಂಬರು ಲೋಕದವರು; ಮಾರಿಕವ್ವತಾಯೆ = ತಾಯಿಯಾದ ಮಾರಿಕಾಂಬೆಯೆ; ಸದ್ಭಕ್ತನು = ಸಮರಸ ಭಕ್ತನು; Written by: Sri Siddeswara Swamiji, Vijayapura