ವಚನ - 407     
 
ಊರಕ್ಕಿ ಊರೆಣ್ಣೆ ಉಣ್ಣು ಮಾರಿಕವ್ವ ತಾಯೆ, ಬಾರೆ ಕುಮಾರನ ತಲೆಗಾಯಿ ಎಂಬಂತೆ; ಕಾಡ ಹೂ ಕೈಯ ಲಿಂಗವ ಪೂಜಿಸುವಾತನ ಭಕ್ತನೆಂಬರು, ಅಲ್ಲ. ತಾನು ಲಿಂಗ ತನ್ನ ಮನವೆ ಪುಷ್ಪ. ಪೂಜೆಯ ಪೂಜಿಸುವಾತನೆ ಸದ್ಭಕ್ತನು ಗುಹೇಶ್ವರಾ.