•  
  •  
  •  
  •  
Index   ವಚನ - 408    Search  
 
ವಾಯದ ಪಿಂಡಿಗೆ ಮಾಯದ ದೇವರಿಗೆ ವಾಯಕ್ಕೆ ಕಾಯವ ಬಳಲಿಸದೆ ಪೂಜಿಸಿರೊ. ಕಟ್ಟುಗೂಂಟಕ್ಕೆ ಬಂದ ದೇವರ ಪೂಜಿಸಲು, ಸೂಜಿಯ ಪೋಣಿಸಿ ದಾರವ ಮರೆದಡೆ ಹೊಲಿಗೆ ಬಿಚ್ಚಿತ್ತು ಗುಹೇಶ್ವರಾ.
Transliteration Vāyada piṇḍige māyada dēvarige vāyakke kāyava baḷalisade pūjisiro. Kaṭṭugūṇṭakke banda dēvara pūjisalu, sūjiya pōṇisi dārava maredaḍe holige biccittu guhēśvarā.
Hindi Translation झूठे पीठ के माया भगवान को, झूठे शरीर को बिना थकाये पूजा करो! खूँटे में बाँधे भगवान को पूजा करे तो, सूई में धागा पिरोने भूले जैसे सिलाई खुली थी गुहेश्वरा। Translated by: Eswara Sharma M and Govindarao B N
Tamil Translation மாயப்பீடத்தில், மாயக் கடவுளுக்கு உடலைத் துன்புறுத்தாமல் பூஜை செய்வீர் தூய உணர்விலரும்பிய கடவுளைப் பூஜிக்க ஊசியைக் கோர்த்து, நூலை மறப்பின் தையல் விட்டுக் கொள்ளும் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಟ್ಟುಗೂಂಟ = ಕಟ್ಟುವ ಗೂಟ, ಶುದ್ದಭಾವ, ನಿಜಲಿಂಗವನು ಗ್ರಹಿಸುವ ಸಾಮರ್ಥ್ಯವುಳ್ಳ ಸುಜ್ಞಾನ ಹಸ್ತ; ಕಾಯವ = ದೇಹವನ್ನು; ದಾರವ ಮರೆದಡೆ = ಪೂರ್ವದ ಸಾಂಸಾರಿಕ ನೆನಹು ಹಾಗೂ ಸಂಸ್ಕಾರಗಳನ್ನು ತೊಡೆದುಹಾಕಿದರೆ; ದೇವರ = ಭಾವಲಿಂಗವನು; ದೇವರಿಗೆ = ದೇವನಿಗೆ(ಪೂಜೆಯ ಮಾಡುವಲ್ಲಿ); ಪಿಂಡಿಗೆ = ಪೀಠ; ಪೂಜಿಸಲು = ಪೂಜಿಸುವುದಕ್ಕಾಗಿ, ಅದರೊಂದಿಗೆ ಯೋಗವನು ಸಾಧಿಸುವುದಕ್ಕಾಗಿ; ಪೂಜಿಸಿರೊ = ಪೂಜಿಸಿರಿ; ಬಂದ = ಅಂಥ ಶುದ್ದಭಾವದಲಿ ಅಭಿವ್ಯಕ್ತವಾದ, ಆ ಸುಜ್ಞಾನ ಹಸ್ತದಲಿ ಕಾಣಬಂದ; ಬಳಲಿಸದೆ = ಬಳಲಿಸಬೇಡಿ; ಬಿಚ್ಚಿತ್ತು = ಬಿಚ್ಚಿಹೋಗುತ್ತದೆ; ಮಾಯದ = ನಿಜವಲ್ಲದ; ವಾಯಕ್ಕೆ = ಬರಿದೆ; ವಾಯದ = ಅರ್ಥವಿಲ್ಲದ, ಹುಸಿಯಾದ; ಸೂಜಿಯ ಪೋಣಿಸಿ = ಆ ಲಿಂಗದ ನೆನಹಿನಲಿ ಮನವ ಕೀಲಿಸಿ; ಹೊಲಿಗೆ = ಸಾಂಸಾರಿಕಬಂಧನ, ಭವಬಂಧನ; Written by: Sri Siddeswara Swamiji, Vijayapura