ಮಹಾಮೇರುವಿನ ಮರೆಯಲ್ಲಿರ್ದು,
ಭೂತದ ನೆಳಲನಾಚರಿಸುವ ಕರ್ಮಿ, ನೀ ಕೇಳಾ,
ಆ ಮಹಾಲಿಂಗಕ್ಕೆ ಮಜ್ಜನವೆಂದೇನೊ?
ಪರಿಮಳಲಿಂಗಕ್ಕೆ ಪತ್ರೆಪುಷ್ಪಗಳೆಂದೇನೊ?
ಜಗಜ್ಯೋತಿಲಿಂಗಕ್ಕೆ ಧೂಪದೀಪಾರತಿಗಳೆಂದೇನೊ?
ಅಮೃತಲಿಂಗಕ್ಕೆ ಆರೋಗಣೆಯೆಂದೇನೊ?
ಗುಹೇಶ್ವರಲಿಂಗದಂತುವ ಬಲ್ಲವರಾರೊ?
Transliteration Mahāmēruvina mareyallirdu,
bhūtada neḷalanācarisuva karmi, nī kēḷā,
ā mahāliṅgakke majjanavendēno?
Parimaḷaliṅgakke patrepuṣpagaḷendēno?
Jagajyōtiliṅgakke dhūpadīpāratigaḷendēno?
Amr̥taliṅgakke ārōgaṇeyendēno?
Guhēśvaraliṅgadantuva ballavarāro?
Hindi Translation महा मेरु की आड में रहकर
भूतल की छाया ढूँढनेवाले कर्मी तू सुन।
उस महालिंग को मज्जन कैसे ?
परिमल लिंग को पत्रपुष्प कैसे ?
जगज्योति लिंग को धूप दीपारति कैसे?
अमृत लिंग को प्रसाद कैसे ?
गुहेश्वर लिंग का स्वरूप कौन जाने?
Translated by: Eswara Sharma M and Govindarao B N
Tamil Translation சிறந்த மேருவைச் சார்ந்து இருந்து
பூமியின் நிழலைத் தேடும்
நற்பேறு அற்றவனே, நீ கேளாய்
அந்த மகாலிங்கத்திற்குத் திருமஞ்சனமோ?
நறுமணலிங்கத்திற்கு வில்வம், மலர்கள் எதற்கோ?
பேரொளி இலிங்கத்திற்கு தீபாராதனை எதற்கோ?
அமுத இலிங்கத்திற்குப் படையல் எதற்கோ?
குஹேசுவரலிங்கத்தின் சொரூபத்தை உணர்ந்தவர் யார்?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂತು = ಸ್ವರೂಪ, ನಿಜರೂಪ; ಅರಸುವ = ಬಯಸಿ, ಅದನ್ನು ಪಡೆಯಲು ಕಷ್ಟಪಡುವ; ಕರ್ಮಿ = ಹತಭಾಗ್ಯನೆ!; ನೀ ಕೇಳಾ = ನನ್ನ ತಿಳಿವಿನ ಮಾತುಗಳನ್ನು ಒಂದು ಕ್ಷಣ ಕೇಳು; ಭೂತಳದ ನೆಳಲನು = ಭೂಮಿಯ ಕಲ್ಲು-ಮಣ್ಣಿನ ಆಸರೆಯನು; ಮರೆಯಲಿರ್ದು = ಅದರ ಆಸರೆಯಲ್ಲಿ ವಾಸಮಾಡಿ; ಮಹಾಮೇರು = ಮೇರುಪರ್ವತ, ಕೇವಲ ಸುವರ್ಣದಿಂದಾದ ಯೋಜನ ಯೋಜನ ಎತ್ತರದ ಆ ಬೆಟ್ಟದಲಿ ಬರಿ ಮುತ್ತು-ರತ್ನಗಳು,
ಅಮೂಲ್ಯ ಸಂಪತ್ತಿನ ಆಗರ.;
Written by: Sri Siddeswara Swamiji, Vijayapura