ವಚನ - 414     
 
ಶರಣ, ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕರವ ನೀಡಿದಡೆ, ಆ ಪುಷ್ಪ ನೋಡಾ ನೋಡಾ ಕರದೊಳಡಗಿತ್ತಲ್ಲಾ! ಅದು ಓಗರದ ಗೊಬ್ಬರವ ನುಣ್ಣದು; ಕಾಮದ ಕಣ್ಣರಿಯದು, ನಿದ್ರೆಯ ಕಪ್ಪೊತ್ತದು. ಅದು ಅರುಣ ಚಂದ್ರ[ರ] ಧರೆಯಲ್ಲಿ ಬೆಳೆಯದು. ಲಿಂಗವೇ ಧರೆಯಾಗಿ ಬೆಳೆದ ಪುಷ್ಪವನು ಗುಹೇಶ್ವರಾ ಎಂದೆಂದಿಗೆಯೂ ನಿರ್ಮಾಲ್ಯವಿಲ್ಲೆಂದು ನಿಮ್ಮ ಶರಣನು ಪ್ರಾಣಲಿಂಗಕ್ಕೆ ಪೂಜೆಯ ಮಾಡಿದನು.