•  
  •  
  •  
  •  
Index   ವಚನ - 415    Search  
 
ಗಗನವೆ ಗುಂಡಿಗೆ ಆಕಾಶವೆ ಅಗ್ಘವಣಿ, ಚಂದ್ರ, ಸೂರ್ಯರಿಬ್ಬರು ಪುಷ್ಪ, ಬ್ರಹ್ಮ ಧೂಪ, ವಿಷ್ಣು ದೀಪ, ರುದ್ರನೋಗರ! ಸಯಧಾನ ನೋಡಾ! ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ!
Transliteration Gaganave guṇḍige ākāśave agghavaṇi, candra, sūryaribbaru puṣpa, brahma dhūpa, viṣṇu dīpa, rudranōgara! Sayadhāna nōḍā! Guhēśvaraliṅgakke pūje nōḍā!
Music Courtesy:
Hindi Translation गगन ही कलश , आकाश ही पवित्र जल, चंद्रसूर्य दोनों फूल देखो। ब्रह्मधूप, विष्णुदीप, रुद्रप्रसाद सयधान देखो! गुहेश्वर लिंग की पूजा देखो। Translated by: Eswara Sharma M and Govindarao B N
Tamil Translation ஆகாயமே கலசம், முகிலே புனிதநீர் சந்திர சூரியரிருவரும் மலர் காணாய்! பிரம்மன் தூபம், விஷ்ணுதீபம் உருத்திரனே படையல் காணாய் குஹேசுவரலிங்கத்திற்குப் பூஜை காணாய். Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಗ್ಘವಣಿ = ಪವಿತ್ರ ಜಲ, ಶಾಂತಿ; ಆಕಾಶ = ಅಂತರಿಕ್ಷ, ಮುಗಿಲು, ಮೇಘ, ಸಹಸ್ರಾರದೊಳಗಿರುವ ಧರ್ಮಮೇಘ, ಶಾಂತಿಮೇಘ, ಋತಂಭರಾ ಪ್ರಜ್ಞೆ.; ಗಗನ = ಪರಮಾಕಾಶ, ಸಹಸ್ರಾರಚಕ್ರದೊಳಗಿರುವ ಬಾನ-ವಿತಾನ; ಗುಂಡಿಗೆ = ಕಲಶ; ಚಂದ್ರಸೂರ್ಯರು ಪುಷ್ಪ = ಸದ್ಭಾವ ಹಾಗೂ ಸುಜ್ಞಾನಗಳು. ಶಿವನು ಇದ್ದಾನೆ- ಇದು ಸದ್ಭಾವ, ಅವನು ನಾನೇ-ಇದು ಸುಜ್ಞಾನ. ಇವೆರಡರ ಸಂಧಾನವೇ ಶಿವೋsಹಂ. ಅ; ಬ್ರಹ್ಮ ಧೂಪ = ಸಹಸ್ರಾರದೊಳಗೆಲ್ಲ ನಿನದಿಸುವ "ಓಂ" ಎಂಬ ಪ್ರಣವನಾದ ಅದು ಧೂಪ; ರುದ್ರನೋಗರ ಸುಯಧಾನ = ಇಹ ಮತ್ತು ಪರಗಳು ಮರಣಶೀಲ. ಸಹಸ್ರಾರಮಂಡಲವು ಆ ಇಹ-ಪರಗಳಾಚೆಗಿನ ಅಮರ ಪದ. ಅಲ್ಲಿ ಇರುವುದು ಬರಿ ಪರಮ ತೃಪ್ತಿ. ಅದುವೆ ಓಗ; ಲಿಂಗಕ್ಕೆ ಪೂಜೆ = ಗುಹೇಶ್ವರನೆಂಬ ಮಹಾಲಿಂಗಕ್ಕೆ ಶರಣನು ಅರ್ಪಿಸುವ ಪೂಜೆ ಇದು; ವಿಷ್ಣು ದೀಪ = ಸಹಸ್ರಾರದೊಳಗಿರುವ ಪರಮ ಅಮೃತ. ಕಾಲದ ಸ್ಪರ್ಶವಿಲ್ಲದ ಆತ್ಮಭಾನ. ಅದು ದೀಪ.; Written by: Sri Siddeswara Swamiji, Vijayapura