Index   ವಚನ - 417    Search  
 
ಹೊರಗನೆ ಕೊಯ್ದು ಹೊರಗನೆ ಪೂಜಿಸಿದವರ ಕಂಡು, ನಾಚಿದೆ ನಾಚಿದೆನಯ್ಯಾ. ಒಳಗೆ, ಒಂದು ಅನಿಮಿಷಲಿಂಗವ ಕಂಡು, ಎನ್ನ ಮನೋಪುಷ್ಪದಲ್ಲಿ ಪೂಜಿಸಿದಡೆ ನಾಚಿಕೆ ಮಾದು ನಿಸ್ಸಂದೇಹಿಯಾದೆನು ಗುಹೇಶ್ವರಾ.