•  
  •  
  •  
  •  
Index   ವಚನ - 416    Search  
 
ಸರೋವರದ ಕಮಲದಲ್ಲಿ ತಾನಿಪ್ಪನು, ಕೆಂದಾವರೆಯ ಪುಷ್ಪದ ನೇಮವೆಂತೊ? ಹೂವ ಮುಟ್ಟದೆ ಕೊಯ್ವ ನೇಮವೆಂತೊ? ಮುಟ್ಟದೆ ಕೊಯ್ವ ಮುಟ್ಟಿದ ಪರಿಮಳ ಗುಹೇಶ್ವರಾ ನಿಮ್ಮ ಶರಣನು.
Transliteration Sarōvarada kamaladalli tānippanu, kendāvareya puṣpada nēmavento? Hūva muṭṭade koyva nēmavento? Muṭṭade koyva muṭṭida parimaḷa guhēśvarā nim'ma śaraṇanu.
Hindi Translation सरोवर के कमल पुष्प में स्वयं है। लाल कमल पुष्प का नेम क्यों ? बिना छुए पुष्प को चुनना नेम कैसा है ? बिना छुए चुनना, छूने का परिमल गुहेश्वरा, तुम्हारा शरण। Translated by: Eswara Sharma M and Govindarao B N
Tamil Translation குளத்திலுள்ள தாமரையில் அவனுள்ளான் செந்தாமரை மலரின் நியமமெதற்கோ? மலரைத் தீண்டாது கொய்யும் நியமமெதற்கோ? தீண்டாது கொய்து, அர்ப்பித்த நறுமணமாக குஹேசுவரனே, உம் சரணன் உளனன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕೆಂದಾವರೆ = ಕೆಂಪು ತಾವರೆ; ತಾನಿಪ್ಪನು = (ಆ ಪೀಠದಲ್ಲಿ) ನೆಲೆಸಿದ್ದಾನೆ ದೇವ; ನೇಮವೆಂತೊ? = ಕೆಂಪು ತಾವರೆಯನರ್ಪಿಸಿ ದೇವನನ್ನು ಅರ್ಚಿಸುತ್ತೇನೆ ಎಂಬ ನೇಮವೇಕೆ?; ನೇಮವೆಂತೊ? = ಅರ್ಪಿಸಿ ಅರ್ಚಿಸುವ ನೇಮಕ್ಕೆ ಏನರ್ಥ?; ಮುಟ್ಟದೆ ಕೊಯ್ವ = ಭೃಂಗ ಮುಟ್ಟದೆ ಇರುವ ಕಮಲವನ್ನು ಕೊಯ್ವ; ಸರೋವರದ ಕಮಲ = ಮನಸ್ಸು ಸರೋವರ. ಅದರಲ್ಲಿ ತೋರಿಬರುವ ಸತ್ ಭಾವವೇ ಹೃದಯ. ಅದು ಪದ್ಮ ಪೀಠ; Written by: Sri Siddeswara Swamiji, Vijayapura