ಎನ್ನಲ್ಲಿ ನಾನು ನಿಜವಾಗಿ ನಿಮ್ಮನರಿದೆಹೆನೆಂದಡೆ
ಅದು ನಿಮ್ಮ ಮತಕ್ಕೆ ಬಪ್ಪುದೆ?
ಎನ್ನ ನಾನು ಮರೆದು, ನಿಮ್ಮನರಿದಡೆ,
ಅದು ನಿಮ್ಮ ರೂಪೆಂಬೆ.
ಎನ್ನ ನಿನ್ನೊಳು ಮರೆದಡೆ,
ಕನ್ನಡಿಯೊಳಗಣ ಪ್ರತಿಬಿಂಬದಂತೆ
ಭಿನ್ನವಿಲ್ಲದೆ ಇದ್ದೆನು ಕಾಣಾ, ಗುಹೇಶ್ವರಾ.
Hindi Translationमुझमें मैं सचही आपको जाने कहें तो ,
क्या आप मानेंगे ?
मैं अपने को भूलकर आपको जाने कहें तो
वह आपका रूप कहूँगा।
यदि मैं आपको भूले तो
आरसी के प्रतिबिंब जैसे
भिन्न रहित था देखा गुहेश्वरा।
Translated by: Eswara Sharma M and Govindarao B N
English Translation
Tamil Translationநான் என் மனத்தில் முழுமையாக உம்மை உணர்ந்துள்ளேன்
என இயம்பின் அதனை நீர் ஏற்பீரோ?
என்னை நான் மறந்து உம்மை நினையின்
அது உம்முடைய சொரூபமென்பேன்
என்னை உம்மோடு அடக்கிக் கொளின்
ஆடியிலுள்ள பிரதிபிம்ப மனையதாம்
பின்னமற்றிருப்பேன் காணாய் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅದು = ಹಾಗೆ ಅರಿಯಲಾದುದು; ಅದು = ಆ ನನ್ನ ಮಾತು; ಅರಿದಡೆ = ಅರಿತಡೆ; ಅರಿದೆಹೆನೆಂದಡೆ = ಅರಿತಿದ್ದೇನೆ ಎಂದು ಹೇಳುವುದಾದರೆ; ಎನ್ನ = ಅರಿವ ನನ್ನನ್ನು, ಅನುಭೂತಿ ಪಡೆದ ನನ್ನನ್ನು, ಅಪರೋಕ್ಷಾನುಭವಿ ನಾನು ಎಂಬ ಭಾವವನು; ಎನ್ನ ನಾನು ಮರೆದು = ನಾನು ಅರಿಯುವವ ಎಂಬ ಭಾವವ ಬಿಟ್ಟು, ನಾನು ಜ್ಞಾತೃ ಎಂಬುದನು ಮರೆತು
ಐಕ್ಯಾನುಸಂಧಾನದ ಮೂಲಕ; ಎನ್ನಲ್ಲಿ = ನನ್ನ ಅಂತರಂಗದಲ್ಲಿ; ಕನ್ನಡಿಯೊಳಗಣ ಪ್ರತಿಬ = ಪ್ರತಿಬಿಂಬವು ಕನ್ನಡಿಯೊಳಗೆ ಅಭಿನ್ನವಾಗಿ ಇರುವಂತೆ; ನಾನು = ಶರಣನಾದ ನಾನು, ಪರಮಾತ್ಮನನ್ನು ಅರಿಯಲೆಳಸುವ ಜಿಜ್ಞಾಸುವಾದ ನಾನು; ನಿಜವಾಗಿ = ಪೂರ್ಣವಾಗಿ, ಯಥಾವತ್ತಾಗಿ; ನಿಮ್ಮ ಮತಕ್ಕೆ ಬಪ್ಪು = ನಿಮಗೆ ಸಮ್ಮತವಪ್ಪುದೆ?(ಇಲ್ಲ); ನಿಮ್ಮ ರೂಪೆಂಬೆ = ನಿಮ್ಮ ನಿಜಸ್ವರೂಪ ಎಂದು ತಿಳಿಯುವೆ; ನಿಮ್ಮನರಿದಡೆ = ನಿಮ್ಮನ್ನು, ಪರಮಾತ್ಮನನ್ನು; ನಿಮ್ಮನು = ಪರಿಪೂರ್ಣನಾದ ಪರಮಾತ್ಮನನ್ನು, ಎಲ್ಲದರೊಂದಿಗೂ ಅಭಿನ್ನವಾಗಿ ನೆಲೆಸಿರುವ ನಿಷ್ಕಲಲಿಂಗವಾದ ನಿಮ್ಮನ್ನು; ನಿಮ್ಮೊಳು = ಪರಮಾತ್ಮನಾದ ನಿನ್ನೊಳಗೆ; ಭಿನ್ನವಿಲ್ಲದಿದ್ದೆನು = ಆಗ ನಾನು ಪರಮಾತ್ಮನಾದ ನಿನ್ನೊಂದಿಗೆ ಅಭಿನ್ನವಾಗಿ ಉಳಿಯುವೆನು; ಮರೆದೆಡೆ = ಅಡಗಿಸಿದರೆ; Written by: Sri Siddeswara Swamiji, Vijayapura