•  
  •  
  •  
  •  
Index   ವಚನ - 436    Search  
 
ಹುಟ್ಟುವರೆಲ್ಲರ ಹುಟ್ಟಬೇಡೆಂದೆನೆ? ಹೊಂದುವರೆಲ್ಲರ ಹೊಂದಬೇಡೆಂದೆನೆ? ಪ್ರಳಯದಲ್ಲಿ ಅಳಿವರ ಅಳಿಯಬೇಡೆಂದೆನೆ? ಗುಹೇಶ್ವರಾ ನಿಮ್ಮನರಿದು ನೆರೆದ ಬಳಿಕ, ಧರೆಯ ಮೇಲುಳ್ಳವರನಿರಬೇಡವೆಂದೆನೆ?
Transliteration Huṭṭuvarellara huṭṭabēḍendene? Honduvarellara hondabēḍendene? Praḷayadalli aḷivara aḷiyabēḍendene? Guhēśvarā nim'manaridu nereda baḷika, dhareya mēluḷḷavaranirabēḍavendene?
Hindi Translation पैदा होनेवालों को मतपैदा हो कहा है न ? पानेवालों को मत पाओ कहा है न? प्रलय में नाश होने वालॊंको मत नाश हो कहा है न? गुहेश्वरा, तुम्हें जानकर मिलने के बाद धरापर रहनेवालों को मत रहो कहा है न? Translated by: Eswara Sharma M and Govindarao B N
Tamil Translation பிறந்துள்ளனைவரையும் பிறக்கற்க என்றேனோ? உலகியல் வாழ்வை விழைவோர்க்கு விழையற்க என்றேனோ? பிரளயத்தில் அழிவோரை, அழியற்க என்றேனோ? குஹேசுவரனே, உம்மை அறிந்து இணைந்த பிறகு பூவுலகில் வாழவிழைவோரை இருக்கற்க என்றேனோ! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಳಿಯಬೇಡೆಂದೆನೆ = ನೀವು ದೇಹವನು ತ್ಯಜಿಸಲೇಬಾರದು, ಪ್ರಳಯಗೊಳ್ಳಲೇಬಾರದು ಎಂದು ನಾನು ಹೇಳಿದೆನೇನು?; ಇರಬೇಡೆಂದೆನೆ = ನೀವು ಇಲ್ಲಿ ಇರಬೇಡಿ ಎಂದು ನಾನೆಂದೂ ಹೇಳಲಿಲ್ಲ; ಗುಹೇಶ್ವರಾ = ಭಗವಂತನೇ ಅದು ನಿನ್ನ ಸೃಷ್ಟಿ, ಅದು ನಿನ್ನ ಸಂಕಲ್ಪ, ಅದಕ್ಕೆ ನಾನೇಕೆ ವ್ಯತ್ಯಯ ತರಲಿ ಹೇಳು? ಆದರೆ ನಾನು ಮಾತ್ರ; ಧರೆಯ ಮೇಲೆ ಉಳ್ಳವರ = ಭೂಮಂಡಲದಲ್ಲಿ ದೇಹಧಾರಿಗಳಾಗಿ ಇರಬೇಕು ಎಂಬುವವರನ್ನು ಕುರಿತು; ನಿಮ್ಮನರಿದು ನೆರೆದ ಬ = ನಿಮ್ಮನ್ನು ಅರಿತು, ನಿಮ್ಮಲ್ಲಿಯೇ ಬೆರೆತೆ, ನನಗೆ ನಿಮ್ಮ ಭವಚಕ್ರದ ಬಂಧನವಿಲ್ಲ, ನಿಮ್ಮ ಘನ ಆನಂದದಲ್ಲಿ ನಾನು ಮಗ್ನ; ಪ್ರಳಯದಲ್ಲಿ ಅಳಿವವರ = ಪ್ರಳಯಕಾಲ ಬಂದಾಗ ಎಲ್ಲರೂ ಅಳಿವವರೆ; ಹಾಗೆ ಅಳಿವವರನ್ನು ಕುರಿತು; ಹುಟ್ಟುಬೇಡೆಂದೆನೆ = ನೀವು ಹುಟ್ಟಬೇಡಿ ಎಂದು ನಾನೇನು ಹೇಳಲಿಲ್ಲ; ಹುಟ್ಟುವರೆಲ್ಲರ = ಯಾರು ಹುಟ್ಟುತ್ತಾರೆಯೋ ಅವರೆಲ್ಲರನು(ಕುರಿತು); ಹೊಂದಬೇಡೆಂದೆನೆ = ನೀವು ಸುಖವನ್ನು ಹೊಂದಬೇಡಿ ಎಂದೇನಾದರೂ ಹೇಳಿದೆನೆ?; ಹೊಂದುವರೆಲ್ಲರ = ಹುಟ್ಟಿ ಬಂದ ಬಳಿಕ ಸಾಂಸಾರಿಕ ಸುಖವನ್ನು ಹೊಂದಬೇಕು ಎನ್ನುವವರನ್ನು ಕುರಿತು; Written by: Sri Siddeswara Swamiji, Vijayapura