ಪರಮತತ್ತ್ವದಲ್ಲಿ ತದ್ಗತವಾದ ಬಳಿಕ
ಬೇರೆ ಮತ್ತೆ ಅರಿದೆಹೆನೆಂಬ ಭ್ರಾಂತೇಕೆ?
ಅರಿವು ಸಯವಾಗಿ ಮರಹು ನಷ್ಟವಾದ ಬಳಿಕ
ತಾನಾರೆಂಬ ವಿಚಾರವೇಕೆ?
ಗುಹೇಶ್ವರನ ಬೆರಸಿ ಭೇದಗೆಟ್ಟ ಬಳಿಕ
ಮತ್ತೆ ಸಂಗವ ಮಾಡಿಹೆನೆಂಬ ತವಕವೇಕಯ್ಯಾ?
Transliteration Paramatattvadalli tadgatavāda baḷika
bēre matte aridehenemba bhrāntēke?
Arivu sayavāgi marahu naṣṭavāda baḷika
tānāremba vicāravēke?
Guhēśvarana berasi bhēdageṭṭa baḷika
matte saṅgava māḍ'̔ihenemba tavakavēkayyā?
Hindi Translation परतत्व में तल्लीन होने के बाद
दूसरे जानने की भ्रांति क्यों ?
ज्ञान निश्चित होकर भूल नाश होने पर
मैं कौन हूँ –विचार क्यों ?
गुहेश्वर से मिलकर भेद दूर होने के बाद
फिर मिलने की व्याकुलता क्यों ?
Translated by: Eswara Sharma M and Govindarao B N
Tamil Translation மனம் இலிங்கத்துடன் ஒன்றியிருக்கும் பொழுது
மற்றொன்றை அறியவிழையும் மருட்சி எதற்கோ?
ஞானம் அரும்பி, மறதி அகன்றபிறகு
தான் யார் என்று ஆராய்வது எதற்கோ?
குஹேசுவரனுடன் இணைந்து பேதம் அகன்றபின்
மீண்டும் சாதனையைச் செய்யும் ஆர்வம் எதற்கோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿವು = ಆತ್ಮನು ಚೈತನ್ಯಸ್ವರೂಪನು ಎಂಬ ತಿಳಿವು; ಅಲ್ಲಿ ತದ್ಗತವಾದ ಬಳಿ = ಆ ನಿಷ್ಕಲಲಿಂಗದಲ್ಲಿ ಮನವು ಮುಳುಗಿದ ಬಳಿಕ, ಲಿಂಗಧ್ಯಾನ ಘನಗೊಂಡ ಬಳಿಕ; ಎಂಬ ತವಕವೇಕಯ್ಯಾ? = ಎಂಬ ಅಪೇಕ್ಷೆ ಏಕೆ ಉಳಿದೀತು?; ಗುಹೇಶ್ವರನ ಬೆರೆಸಿ = ನಿಷ್ಕಲಲಿಂಗ ಒಂದಾಗಿ; ತಾನಾರೆಂಬ ವಿಚಾರವೇಕೆ = ಮತ್ತೆ ತಾನು ಯಾರು? ತನ್ನ ಸ್ವರೂಪ ಏನು?-ಎಂಬ ಜಿಜ್ಞಾಸೆಗೆ ಅದೆಲ್ಲಿ ಅವಕಾಶ?; ನಷ್ಟವಾದ ಬಳಿಕ = ಮರೆಯಾದ ಬಳಿಕ; ಪರತತ್ವ್ತ = ನಿಷ್ಕಲಲಿಂಗ; ಬೇರೆ ಮತ್ತರಿದೆಹೆನೆಂ = ಮತ್ತೆ ಏನನ್ನಾದರೂ ಅಭಿಧ್ಯಾನಯೋಗದಿಂದ ಅರಿಯಬೇಕು ಎಂಬ; ಭೇದಗೆಟ್ಟ ಬಳಿಕ = ಆ ಲಿಂಗವು ಬೇರೆ, ತಾನು ಬೇರೆ ಎಂಬ ಭೇದವು ಅಳಿದುಹೋದ ಬಳಿಕ; ಭ್ರಾಂತಿ ಏಕೆ? = ಭ್ರಾಂತಿಯು ಏಕೆ ಉಂಟಾದೀತು?; ಮತ್ತೆ ಸಂಗವ ಮಾಡಿಹೆನ = ಮತ್ತೆ ಸಮರಸಸಾಧನೆಯ ಮಾಡಬೇಕು; ಮರಹು = ಆತ್ಮವಿಷಯಕ ಅಜ್ಞಾನವು; ಸಯವಾಗಿ = ಅಳವಟ್ಟು;
Written by: Sri Siddeswara Swamiji, Vijayapura