ಬೋನದೊಳಗೊಂದು ಆನೆ ಇದ್ದಿತ್ತು.
ಬೋನ ಬೆಂದಿತ್ತು ಆನೆ ಬದುಕಿತ್ತು.
ಇದೇನು ಸೋಜಿಗವಯ್ಯಾ?
ದೇವ ಸತ್ತ, ದೇವಿ ಕೆಟ್ಟಳು!
ಆನು ಬದುಕಿದೆನು ಗುಹೇಶ್ವರಾ.
Transliteration Bōnadoḷagondu āne iddittu.
Bōna bendittu āne badukittu.
Idēnu sōjigavayyā?
Dēva satta, dēvi keṭṭaḷu!
Ānu badukidenu guhēśvarā.
Hindi Translation पिंजडे में एक हाथी था।
पिंजडा पका था, हाथी जिंदा था;
यह क्या आश्चर्य है ?
देव मरा, देवी बिगडी,
मैं जिया गुहेश्वरा।
Translated by: Eswara Sharma M and Govindarao B N
Tamil Translation கூண்டினிலே ஒரு யானை இருந்தது
கூடு எரிகிறது, யானை உயிர் பிழைத்தது!
இது என்ன வியப்பு ஐயனே?
இறைவன் மடிந்து, தேவி கெட்டனள்
நான் பிழைத்துள்ளேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆನೆ ಬದುಕಿತ್ತು = ಆನೆ ಬದುಕಿತ್ತು, "ನಾನು" ಎಂಬುದು ಶಾಶ್ವತವಾಗಿ ಉಳಿದಿತ್ತು; ಆನೆ ಬದುಕಿದೆನು = ನಾನೊಬ್ಬನೆ; ಪರವಸ್ತುವೊಂದೇ ಉಳಿಯಿತು; ಇದೇನು ಸೋಜಿಗವಯ್ಯಾ? = ಬೋನು ಬೆಂದರೂ ಆನೆ ಮಾತ್ರ ಉಳಿವುದು ಅತ್ಯಂತ ಸೋಜಿಗದ ಮಾತು; ಇದ್ದಿತ್ತು = ಇತ್ತು; ಒಂದು ಆನೆ = ಒಂದು ಆನೆಯು, "ನಾನು" ಎಂಬುದು; ಒಳಗೆ = ಅದರ ಒಳಗೆ, ಆ ಮನದೊಳಗೆ; ದೇವ ಸತ್ತ = ಶಿವತತ್ವ್ತವು ಮರೆಯಾಯಿತು; ದೇವಿ ಕೆಟ್ಟಳು = ಶಕ್ತಿ ತತ್ವ್ತವು ಮರೆಯಾಯಿತು, ಶಿವ-ಶಕ್ತಿಯಿಂದುಂಟಾದ ವಿಶ್ವವೆಲ್ಲ ಬದಲಾಯಿತು.; ಬೋನ = ಬೋನು, ಪ್ರಾಣಿಗಳ ಬಂಧಿಸಿಡುವ ಆಲಯ, ಮನಸ್ಸು; ಬೋನ ಬೆಂದಿತ್ತು = ಆ ಆಲಯವು ಸುಟ್ಟು ಹೋಯಿತ್ತು, ಮನವು ಉನ್ಮನಗೊಂಡಿತ್ತು, ಅಮನವಾಯಿತ್ತು;
Written by: Sri Siddeswara Swamiji, Vijayapura