•  
  •  
  •  
  •  
Index   ವಚನ - 455    Search  
 
ಪರುಷಕ್ಕೆ ಬೆಲೆಯಿಲ್ಲ, ಪ್ರಾಣಕ್ಕೆ ನಿರ್ಮಾಲ್ಯವಿಲ್ಲ. ರುಚಿಗೆ ಎಂಜಲಿಲ್ಲ, ಸುಖಕ್ಕೆ ಆರೋಚಕವಿಲ್ಲ. ಗುಹೇಶ್ವರಾ ನಿಮ್ಮ ಶರಣಂಗೆ ಭವವಿಲ್ಲ ಬಂಧನವಿಲ್ಲಯ್ಯಾ.
Transliteration Paruṣakke beleyilla, prāṇakke nirmālyavilla. Rucige en̄jalilla, sukhakke ārōcakavilla. Guhēśvarā nim'ma śaraṇaṅge bhavavilla bandhanavillayyā.
Hindi Translation परुष को मौल्य नहीं, प्राण को निर्माल्य नहीं। रूचि को जूठन नहीं, सुख को रूचि नहीं। गुहेश्वरा, तुम्हारे शरण को भव नहीं, बंधन नहीं। Translated by: Eswara Sharma M and Govindarao B N
Tamil Translation பரிசனவேதிக்கு விலையில்லை, பிராணனுக்கு நிர்மாலியமில்லை சுவைக்கு மிச்சல் இல்லை, இன்பத்திற்கு நயவாமையில்லை குஹேசுவரனே, உம் சரணருக்குப் பிறவி, பிணைப்பு இல்லை ஐயனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರೋಚಕ = ಅಪ್ರಿಯಭಾವ; ಸುಖದ ವಿಷಯದಲ್ಲಿ ಅಪ್ರಿಯಭಾವ ಎಂಬುದೇ; ಇಲ್ಲ = ಪ್ರಾಣಕ್ಕೆ ಶುದ್ದೀಕರಣ ಎಂಬುದು ಇಲ್ಲ.; ಇಲ್ಲ = ಇರದು; ಎಂಜಲವಿಲ್ಲ = ಅದನು ಎಂಜಲುಗೊಳಿಸಲು ಆಗದು; ನಿಮ್ಮ ಶರಣಂಗೆ = ಪರಮಾತ್ಮನಲ್ಲಿ ಒಂದಾದ ಶರಣನಿಗೆ.; ನಿರ್ಮಾಲ್ಯ = ನಿರ್ಮಲತೆ, ಶುದ್ದೀಕರಣ, ಅಲಂಕರಣ; ಪರುಷ = ಕವಿಸಮಯದ ಪರುಷಮಣಿ, ಕೇವಲ ಸ್ಪರ್ಶದಿಂದ ಲೋಹವನ್ನು ಸುವರ್ಣವನ್ನಾಗಿ ಪರಿವರ್ತಿಸುತ್ತದೆ; ಪ್ರಾಣ = ದೇಹ, ಇಂದ್ರಿಯ, ಮನಸ್ಸು-ಬುದ್ದಿ-ಇವುಗಳಿಗೆ ಕಾರ್ಯಶಕ್ತಿಯನ್ನೀಯುವ ವಿಶೇಷ ತತ್ವ್ತ; ಜೀವಶಕ್ತಿ.; ಬಂಧನವಿಲ್ಲ = ಕರ್ಮಬಂಧನವೆಂಬುದಿಲ್ಲ.; ಬೆಲೆಯಿಲ್ಲ = ಆ ಪರುಷಕ್ಕೆ ಬೆಲೆಯಿಲ್ಲ; ಬೆಲೆಕಟ್ಟಲು ಆಗದು; ಭವವಿಲ್ಲ = ಜನ್ಮಾಂತರವಿಲ್ಲ; ರುಚಿಗೆ = ಖಾದ್ಯಪದಾರ್ಥಗಳಲ್ಲಿರುವ ಸವಿಗೆ; ಸುಖಕ್ಕೆ = ವಿಷಯಗಳಿಂದ ಉಂಟಾಗುವ ಒಂದು ವಿಶೇಷವಾದ ಪ್ರಿಯ ಅನುಭವ; ಅದಕ್ಕೆ.; Written by: Sri Siddeswara Swamiji, Vijayapura