ಅರಿವು ಅರಿವು ಎನುತಿಪ್ಪಿರಿ, ಅರಿವು ಸಾಮಾನ್ಯವೆ?
ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು.
ಮುಂದಣ ಹೆಜ್ಜೆ[ಯು]ಳಿದಲ್ಲದೆ,
ಒಂದು ಪಾದ ನೆಲೆಗೊಳ್ಳದು.
ನೆಲನ ಬಿಟ್ಟು ಆಕಾಶದಲ್ಲಿ ನಿಂದು
ಮುಗಿಲೊಳಗೆ ಮಿಂಚಿದಲ್ಲದೆ ತಾನಾಗಬಾರದು.
ಗುಹೇಶ್ವರನೆಂಬುದು ಬರಿದೆ ಬಹುದೆ ಹೇಳಿರೆ?
Hindi Translationज्ञान ज्ञान कहते हैं, ज्ञान सामान्य है क्या ?
पीछे की कदम देखे बिना
खडी कदम न जानना।
आगे की कदम बिना जाने
एक पग स्थिर नहीं होता।
भूमि छोडकर आकाश पर खडे हो तो,
बिना बादल चमके खुद नहीं बनता।
गुहेश्वर नामक सिर्फ आता है ,कहिए?
Translated by: Eswara Sharma M and Govindarao B N
English Translation
Tamil Translationஅறிவு அறிவு என்பீர், அறிவு எளிமையானதோ?
கடந்து வந்த பாதையை உணர்ந்தாலன்றி
சிவ வழியில் அடிவைக்க இயலாது
மீண்டும் பாதையில் செல்லாமலிருப்பாய்
இலிங்க சொரூபம் நிலை கொள்ளாது
நிலத்தை விட்டு, ஆகாயத்தில் நின்று
மனமற்ற நிலையில் ஞானமின்றி ஒன்றவியலுமோ?
குஹேசுவரனை அடைவது எளிமையானதோ? கூறுவீர்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅರಿವು = ಆತ್ಮಾನುಭೂತಿ, ಸಾಕ್ಷಾತ್ಕಾರ; ಅಳಿ = ಇಲ್ಲದಾಗು, ಸಾಧನೆ ಕೊನೊಗೊಳ್ಳು, ಐಕ್ಯದ ಭಾವ ಕೂಡ ಅಡಗಿಹೋಗು; ಆಕಾಶ = ಅಜಡವಾದ ಆತ್ಮಭಾವ; ಒಂದು ಪಾದ = ಲಿಂಗಪದ, ಅಂಗಭಾವವಳಿದ ಶುದ್ದಚೇತನಸ್ವರೂಪ; ನಿಂದ ಹೆಜ್ಜೆ = ಶಿವಪಥದಲಿ ಇರಿಸಿದ ಹೆಜ್ಜೆ, ಶಿವಪಥದ ಬಾಳು; ನೆಲ = ಜಡವಾದ ದೇಹಭಾವ; ನೋಡಿಕಾಣು = ಚೆನ್ನಾಗಿ ಅರಿತುಕೊ; ಮಿಂಚು = ಮಹಾಪ್ರಜ್ಞಾವತರಣ, ಶುದ್ದಲಿಂಗಭಾನ; ಮುಂದಣ ಹೆಜ್ಜೆ = ಮುಂದೆ ಇಡಬೇಕಾದ ಹೆಜ್ಜೆ, ಐಕ್ಯಸ್ಥಿತಿ; ಮುಗಿಲು = ಅಮನಸ್ಕ ಅವಸ್ಥೆ; ಸಾಮಾನ್ಯವೆ? = ಅದು ತಾನಾಗಿಯೆ ಸುಲಭವಾಗಿ ಅಳವಡುವಂಥದಲ್ಲ; ಹಿಂದಣ ಹೆಜ್ಜೆ = ಈ ಹಿಂದೆ ನಡೆದು ಬಂದ ಹೆಜ್ಜೆ, ಭವಪಥದ ಬದುಕು; Written by: Sri Siddeswara Swamiji, Vijayapura