ಮದ್ಯ ಮಾಂಸಾದಿಗಳ ಮುಟ್ಟೆವೆಂದೆಂಬಿರಿ,
ನೀವು ಕೇಳಿರಣ್ಣಾ.
ಮದ್ಯವಲ್ಲವೇನು ಅಷ್ಟಮದಂಗಳು?
ಮಾಂಸವಲ್ಲವೇನು ಸಂಸಾರಸಂಗ?
ಈ ಉಭಯವನತಿಗಳದಾತನೆ,
ಗುಹೇಶ್ವರಲಿಂಗದಲ್ಲಿ ಲಿಂಗೈಕ್ಯನು.
Transliteration Madya mānsādigaḷa muṭṭevendembiri,
nīvu kēḷiraṇṇā.
Madyavallavēnu aṣṭamadaṅgaḷu?
Mānsavallavēnu sansārasaṅga?
Ī ubhayavanatigaḷadātane,
guhēśvaraliṅgadalli liṅgaikyanu.
Hindi Translation शराब गोश्त आदियों का न छूते हैं कहनेवाले तुम सुनो
क्या अष्ट मद ही शराब नहीं ?
क्या संसार संग ही गोश्त नहीं ?
इन उभयों को दूरकरनेवाले ही
गुहेश्वर लिंग में लिंगैक्य है।
Translated by: Eswara Sharma M and Govindarao B N
Tamil Translation போதைப்பொருள், இறைச்சியை உண்பதில்லை
என்று கூறும் நீங்கள் கேண்மின்
எண்மதங்கள் போதைப் பொருட்கள் அல்லவோ?
உலகியல் வாழ்வு இறைச்சி அல்லவோ?
இவற்றைத் துறந்தவனே குஹேசுவரனிடம் ஒடுங்கவியலும்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅತಿಗಳೆ = ದೂರುಮಾಡು, ತ್ಯಜಿಸು; ಅಷ್ಟಮದಂಗಳು = ಕುಲ, ಛಲ, ಧನ,ರೂಪ, ಯೌವನ, ವಿದ್ಯಾ, ರಾಜ್ಯ ಹಾಗೂ ತಪಸ್ಸು-ಈ ಅಷ್ಟವಿಷಯಕವಾದ ಅತ್ಯಭಿಮಾನ, ಅಹಂಕಾರ; ಸಂಸಾರಸಂಗ = ವಿಷಯೋಪಭೋಗಲಾಲಸೆ;
Written by: Sri Siddeswara Swamiji, Vijayapura