•  
  •  
  •  
  •  
Index   ವಚನ - 497    Search  
 
ಭಾವದಲ್ಲಿ ಭ್ರಮಿತರಾದವರ ಸೀಮೆಯೇನು? ನಿಸ್ಸೀಮೆಯೇನು? ವಚನದ ರಚನೆಯ ರಂಜನೆಯ ಲೀಲೆಯನಾಡುವರು. ಗುಹೇಶ್ವರನಿಪ್ಪ ಗುಪ್ತವೆಂತೆಂದರಿಯರು.
Transliteration Bhāvadalli bhramitarādavara sīmeyēnu? Nis'sīmeyēnu? Vacanada racaneya ran̄janeya līleyanāḍuvaru. Guhēśvaranippa guptaventendariyaru. Show less
Hindi Translation भाव भ्रमितों की सीमा क्या है, निःसीमा क्या है ? वचन रचना रंजन लीला करते; गुहेश्वर का निज रूप रहस्य नहीं जानते । Translated by: Eswara Sharma M and Govindarao B N
Tamil Translation மருட்சியுடன் கூடிய உணர்வு உள்ளோர்க்கு அவர்தம் நடைமுறை என்ன? ஞானம் என்ன? மனங்கவரும் கவிதையை இயற்றி லீலை புரிவர் குஹேசுவரனின் உண்மை சொரூபத்தை அறியார். Translated by: Smt. Kalyani Venkataraman, Chennai
ಶಬ್ದಾರ್ಥಗಳು ಗುಪ್ತ = ನಿಜದ ನೆಲೆ, ನಿಜಸ್ವರೂಪ, ದೇವನ ರಹಸ್ಯ; ನಿಸ್ಸೀಮೆ = ಜ್ಞಾನ; ಭಾವದಲ್ಲಿ ಭ್ರಮಿತರಾಗ = ಲಿಂಗವನು ಅರಿತೆವು ಎಂಬ ಭಾವಭ್ರಮೆಗೆ ಒಳಗಾಗು; ವಚನ ರಚನೆಯ ರಂಜನೆ = ಚಾತುರ್ಯದಿಂದ ವಚನಗಳನ್ನು ರಚಿಸುವ ಮನಮೋಹಕ ಕ್ರೀಡೆ; ಸೀಮೆ = ಆಚರಣೆ; Written by: Sri Siddeswara Swamiji, Vijayapura