ಅಘಟಿತ ಘಟಿತನೆ ವಿಪರೀತ ಚರಿತ್ರನೆ,
ಸಾವರ ಕೈಯಲ್ಲಿ ಪೂಜೆಗೊಂಬರೆ ಲಿಂಗಯ್ಯಾ?
ಸಾವರ ನೋವರ ಕೈಯಲ್ಲಿ ಪೂಜೆಗೊಂಬುದು
ಲಜ್ಜೆ ಕಾಣಾ, ಗುಹೇಶ್ವರಾ.
Transliteration Aghaṭita ghaṭitane viparīta caritrane,
sāvara kaiyalli pūjegombare liṅgayyā?
Sāvara nōvara kaiyalli pūjegombudu
lajje kāṇā, guhēśvarā.
Hindi Translation अघटित घटित, विपरीत चरित्र,
मृत्यु वशों के हाथ से पूजा पायेंगे लिंगय्या ?
मृत्यु वशी, दुःखितोंसे पूजा पाना
लज्जा देखो गुहेश्वरा ।
Translated by: Eswara Sharma M and Govindarao B N
Tamil Translation செய்ய இயலாததைச் செய்து முடிப்பவன்
சிறப்பான பெருமைகளை உடையவன்
புலனின்பங்களை நயப்போரின் பூஜையை இலிங்கம் ஏற்குமோ?
மரித்தல் துயரங்களுக்கு ஆட்படுவோர் கையினால்
பூஜையை ஏற்பது நாணத்தக்கது குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಘಟಿತ ಘಟಿತನು = ಅಸಾಧ್ಯವಾದುದನು ಸುಸಾಧ್ಯಗೊಳಿಸುವವನು; ವಿಪರೀತ ಚರಿತ್ರನು = ಅಸಾಧಾರಣ ಮಹಿಮನು, ವಿಲಕ್ಷಣ ಸ್ವರೂಪನು; ಸಾವ ನೋವರು = ಜನ್ಮ-ಮರಣಗಳಿಗೆ ಒಳಗಾದವರು, ಭವದುಃಖಕ್ಕೆ ಸಿಲುಕಿದವರು;
Written by: Sri Siddeswara Swamiji, Vijayapura