•  
  •  
  •  
  •  
Index   ವಚನ - 501    Search  
 
ಪೃಥ್ವಿ ಅಪ್ಪು ತೇಜ ವಾಯು ಆಕಾಶದಲ್ಲಿ ಬೆಳೆಯುತ್ತಿದ್ದಡೇನು ನೋಡಾ. ಘನ ಘನವನರಿದೆನೆಂಬ ಮರುಳು ಮಾನವರ ನೋಡಾ. ನಿರ್ಣಯವಿಲ್ಲದ ನಿರ್ವಿಕಾರ ಗುಹೇಶ್ವರನೆಂಬ ಮಹಾಘನವ ತಿಳಿಯರು ನೋಡಾ!
Transliteration Pr̥thvi appu tēja vāyu ākāśadalli beḷeyuttiddaḍēnu nōḍā. Ghana ghanavanaridenemba maruḷu mānavara nōḍā. Nirṇayavillada nirvikāra guhēśvaranemba mahāghanava tiḷiyaru nōḍā!
Hindi Translation पृथ्वि-जल-तेज- वायु आकाश में क्या बढ़ रहा है देखो । घन घन को जाने पागल मानव देखो। बिना निर्णय निर्विकार गुहेश्वर जैसे महा घन नहीं जानते देखो। Translated by: Eswara Sharma M and Govindarao B N
Tamil Translation நிலம், நீர், தீ, வாயு ஆகாய இணைவில் வளர்ந்தால் என்ன, காணாய் முழுமையிலும் முழுமையை உணர்ந்தேனெனும் மருள் கொண்ட மனிதரைக் காணாய் அறிவால் உறுதி செய்ய வியலாத மாறுதலற்ற குஹேசுவரனெனும் முழுமையை அறியார் காணாய்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಘನ ಘನ = ಘನಕ್ಕೆಯೂ ಘನ, ಪೂರ್ಣಕ್ಕೆಯೂ ಪೂರ್ಣ, ವಿಶ್ವವು ಪೂರ್ಣವಾದರೆ ಅದನ್ನೂ ಒಳಗೊಂಡಿರುವ ಪರವಸ್ತುವು ಪೂರ್ಣಕ್ಕೆ ಪೂರ್ಣ; ನಿರ್ಣಯವಿಲ್ಲದ = ಬುದ್ದಿಯಿಂದ ನಿರ್ಣಯಿಸಲಿಕ್ಕಾಗದ ಸ್ವರೂಪವುಳ್ಳ; ನಿರ್ವಿಕಾರ = ಅಪರಿಣಾಮಿಯಾದ; ಬೆಳೆ = ದೈಹಿಕ, ಮಾನಸಿಕ ಹಾಗೂ ಬೌದ್ದಿಕವಾಗಿ ಬೆಳೆ; ಮರುಳು = ತಿಳಿಯದೆ ಇದ್ದರೂ ತಿಳಿದಿದ್ದೇನೆಂಬ ಭ್ರಮೆ ಉಳ್ಳವ; ಮಹಾಘನ = ಪರಿಪೂರ್ಣ ಪರವಸ್ತು; Written by: Sri Siddeswara Swamiji, Vijayapura