ಆಗ ಹುಟ್ಟಿ ಬೇಗ ಸಾವ ಕಾಯಗೊಂಡ ಮಾನವಾ,
ನೀ ದೇವರೆನಿಸಿಕೊಂಬುದೊಂದು ಆವುದಂತರ ಹೇಳಾ?
ದೇವರು ಸಾವಡೆ, ದೇವರಿಗೂ ಸಾವರಿಗೂ ಆವುದಂತರ ಹೇಳಾ?
ದೇವರಿಗೆ ದೇವಲೋಕ, ಮಾನವರಿಗೆ ಮರ್ತ್ಯಲೋಕ,
ಗುಹೇಶ್ವರ ಅಲ್ಲಯ್ಯಂಗೆ ಇನ್ನಾವ ಲೋಕವೂ ಇಲ್ಲ.
Hindi Translationतभी जन्में, तुरंत मरने शरीर पाया मानव!
तुम देव कहलाने का क्या अंतर कहो ?
देव मरे, देव और मरनेवालों में क्या अंतर कहो ?
देव का देवलोक, मानवों का मृत्युलोक ,
गुहेश्वर को और अन्य लोक नहीं।
Translated by: Eswara Sharma M and Govindarao B N
English Translation
Tamil Translationஅழியத்தக்க உடலைப் பெற்றுள்ள மனிதனே!
சுரர்என எண்ணுவதால் என்ன வேறுபாடுள்ளது?
சுரரும் மறையின் கடவுளுக்கும் இறப்பவருக்கும்
என்ன வேறுபாடு உள்ளது. பகர்வாய்
தேவருக்கு தேவலோகம், மனிதருக்கு மண்ணுலகம்
குஹேசுவரலிங்கத்திலிணையின் வேறு எந்த உலகமுமில்லை.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಂತರ = ವ್ಯತ್ಯಾಸ; ಆಗ ಹುಟ್ಟಿ ಬೇಗ ಸಾವ = ನಶ್ವರವಾದ, ಅಂದು ಹುಟ್ಟಿ, ಮುಂದೊಂದು ದಿನ ಸಾವನ್ನಪ್ಪುವ; ಕಾಯಗೊಂಡ = ದೇಹ ಧರಿಸಿದ; ದೇವಲೋಕ = ದೇವತೆಗಳು ಬಾಳುವ ಲೋಕ; ಮರ್ತ್ಯಲೋಕ = ಮಾನವರು ವಾಸಿಸುವ ಲೋಕ; ಮಾನವಾ = ಬುದ್ದಿವಂತನಾದ ಮನುಷ್ಯನೆ ವಿಚಾರಮಾಡು; ಸಾವಡೆ = ಸಾಯುವುದಾದರೆ; ಸಾವರು = ಮರ್ತ್ಯಲೋಕದ ಮನುಷ್ಯರು; Written by: Sri Siddeswara Swamiji, Vijayapura