ಮಹಾಮಂಜಿನ ಸಂಗ್ರಹದ ಘಟಾಘಟಿತರವರೆಲ್ಲರು
ಕುಂಜರನ ಪಂಜರದಲ್ಲಿ ಸಂಜೀವಿತರಾಗಿಪ್ಪರು!
ಎಂಜಲವನುಂಡುಂಡು ಬಂದು ಅಂಜದೆ ನುಡಿವುತ್ತಿಪ್ಪರು.
ರಂಜನೆಗೊಳಗಪ್ಪುದೆ ನಿರಂಜನದ ಬೆಳಗು?
ಆಗರದ ಸಂಚವನರಿಯರು!
ರಂಜಕನೂ ಅಲ್ಲ, ಭುಂಜಕನೂ ಅಲ್ಲ,
ಗುಹೇಶ್ವರಾ ನಿಮ್ಮ ಶರಣ ಸಂಜೀವನರಹಿತನು!
Hindi Translationमाया की आड़ के संग्रह में घटाघटित सब
कुंजर की पिंजड़े में बंधित हुए हैं।
जूठन खा खाकर आकर बिना डरे बोल रहे हैं।
आडंबर की बात के वश हो जायेंगे ? ज्ञान का रहस्य नहीं जानते!
रंजक भी नहीं; भुंजक भी नहीं;
गुहेश्वरा, तुम्हारा शरण संजीवन रहित है!
Translated by: Eswara Sharma M and Govindarao B N
English Translation
Tamil Translationமாயையெனும் மேகத்திரளில், பெரியோரனைவரும்
யானையின் கூண்டிலே நிலைத்து இருப்பர்
மிச்சிலை உண்டு உண்டு அஞ்சாது கூறிக் கொண்டிருப்பர்
சொல்மாலைக்கு சிக்குவனோ? பேரின்ப அமுதக் கடலை அறியார்
சொல்லாடுவோனுமன்று, துய்ப்பவனுமன்று
குஹேசுவரனே, உம் சரணன் உடல், பிராண எண்ணமற்றவன்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಆಗರದ ಸಂಚ = ಸಚ್ಚಿದಾನಂದದ ಅನಂತ ಸಾಗರವೇ ಆದ ಪರಮಾತ್ಮನ ರಹಸ್ಯ; ಎಂಜಲು = ಭುಕ್ತಭೋಜನ, ಕರ್ಮಫಲಭೋಗ, ವಿಷಯೋಪಭೋಗ, ; ಒಳಗಪ್ಪುದೆ = ಪರವಸ್ತುವು ನಿಲುಕೀತೆ? ಅದರ ಅನುಭವ ಸಾಧ್ಯವಾದೀತೆ?; ಕುಂಜರ = ಆನೆ, ಅಹಂಕಾರ; ಘಟಾಘಟಿತರು = ಮಹಾ ಮಹಾವ್ಯಕ್ತಿಗಳು; ನುಡಿ = ಬ್ರಹ್ಮದ ಮಾತುಗಳನ್ನಾಡು; ಪಂಜರ = ಬೋನು, ಗೃಹ; ಭುಂಜಕ = ವಿಷಯಾರಾಮಿ; ಮಾಯಾಮಂಜು = ಮಾಯೆ ಎಂಬ ಮಂಜು, ಸತ್-ರಹಿತ ವಸ್ತು; ರಂಜಕ = ಬರಿ ಮಾತುಗಾರ; ರಂಜನೆಗೆ = ಬರಿ ರಂಜನಾತ್ಮಕ ಮಾತುಗಳಿಗೆ; ಸಂಗ್ರಹ = ಆ ಮಾಯಾಮಂಜಿನ ಸಮೂಹ, ಪ್ರಾಕೃತಿಕ ದೇಹ; ಸಂಜೀವನ ರಹಿತ = ಪ್ರಾಣಾಭಿಮಾನ ವಿರಹಿತ, ಸದಾ ಪ್ರಾಣವನು ಧರಿಸಿರಬೇಕು ಎಂಬ ಭಾವವಿರಹಿತ; ಸಂಜೀವಿತರಾಗು = ಶಾಶ್ವತವಾಗು ಬಂಧನೆಗೆ ಒಳಗಾಗು; Written by: Sri Siddeswara Swamiji, Vijayapura