ಆಶೆಯ ವೇಷವ ಧರಿಸಿ ಭಾಷೆ ಪಲ್ಲಟವಾದರೆ
ಎಂತಯ್ಯಾ ಶರಣಪಥ ವೇದ್ಯವಹುದು?
ತ್ರಿಭುವನದ ಮಸ್ತಕದ ಮೇಲಿಪ್ಪ
ಮೂರು ಗಿರಿಯ ಹುಡಿಗುಟ್ಟದನ್ನಕ್ಕರ
ಎಂತಯ್ಯಾ ಶಿವಪಥ ಸಾಧ್ಯವಹುದು?
ಭದ್ರೆನಿದ್ರೆಯೆಂಬುವರ ಮೂಲವ ನಾಶಮಾಡದನ್ನಕ್ಕರ,
ಎಂತಯ್ಯಾ ಲಿಂಗೈಕ್ಯವು?
ಅತಳಲೋಕದಲ್ಲಿ ಕುಳ್ಳಿರ್ದು,
ಬ್ರಹ್ಮಲೋಕವ ಮುಟ್ಟಿದೆನೆಂಬವರೆಲ್ಲ
ಭವಭಾರಕ್ಕೊಳಗಾದುದ ಕಂಡು
ನಾನು ಬೆರಗಾದೆನು ಗುಹೇಶ್ವರಾ.
Transliteration Āśeya vēṣava dharisi bhāṣe pallaṭavādare
entayyā śaraṇapatha vēdyavahudu?
Tribhuvanada mastakada mēlippa
mūru giriya huḍiguṭṭadannakkara
entayyā śivapatha sādhyavahudu?
Bhadrenidreyembuvara mūlava nāśamāḍadannakkara,
entayyā liṅgaikyavu?
Ataḷalōkadalli kuḷḷirdu,
brahmalōkava muṭṭidenembavarella
bhavabhārakkoḷagāduda kaṇḍu
nānu beragādenu guhēśvarā.
Hindi Translation आशा वेष धारण कर भाषा पलटा हो तो
शरण पथ कैसे वेद्य है ?
त्रिभुवन के मस्तक पर रहे तीन अहंभाव नाश किये बिना,
शिवपथ कैसे साध्य है ।
शुभ अशुभ मूल नाश न होने तक
लिंगैक्य कैसा है?
अतल लोक में बैठे ब्रह्म लोक पहुँचे भ्रम में
भवभार के वश हुए को देख मैं चकित हुआ गुहेश्वरा ।
Translated by: Eswara Sharma M and Govindarao B N
Tamil Translation திருச்சின்னம் தரித்து, தக்க நடையில்லை எனின்
சரணர்தம் வழியிலே செல்லவியலுமோ?
மூவுலகின் தலையின் மீதுள்ள மும்மலையை அகற்றும் வரையில்
சிவவழியிலே செல்ல வியலுமோ?
நன்மை தீமை என்போரின் வேரினை அழிக்கும் வரையில்
சிவனுடன் ஒருமிக்கவியலுமோ?
கீழுலகில் அமர்ந்தவாறு பிரம்மலோகத்தை அடைந்தோம்
என்று கூறுவோர் பிறவிப்பிணைப்பில் கட்டுண்டதைக்
கண்டு நான் வியப்பெய்தினேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅತಳಲೋಕ = ಕೆಳಗಿನ ಲೋಕ, ಕೆಳಗಿನ ಸ್ತರ, ವೈಷಯಿಕ ಜೀವನ; ಆಶೆಯ ವೇಷ = ಆಶೆಯನ್ನು ನಿರಸ್ತಗೊಳಿಸಿದ ಲಾಂಛನ; ಗಿರಿಗಳು = ಆ ಮೂರೂ ದೇಹಗಳ ಸಂಬಂಧದಲ್ಲಿ ಉಂಟಾಗುವ ಆ ದೇಹವಿಷಯಕ ಅಹಂ-ಮಮ ಭಾವಗಳು; ತ್ರಿಭುವನ = ಸತ್ವಾದಿ ತ್ರಿಗುಣಗಳಿಂದ ರಚಿತವಾದ ಸ್ಥೂಲ-ಸೂಕ್ಷ್ಮ ಮತ್ತು ಕಾರಣ ದೇಹಗಳು.; ನಿಭದ್ರೆ = ಅಶುಭ ಭಾವನೆ; ಪಲ್ಲಟ = ಲಾಂಛನಕ್ಕೆ ವಿರುದ್ದವಾದ; ಬ್ರಹ್ಮಲೋಕ = ಊರ್ಧ್ವಲೋಕ, ಉನ್ನತಪ್ರಜ್ಞಾಸ್ತರ, ಬ್ರಹ್ಮಾನುಭವದ ಸ್ಥಲ; ಭದ್ರೆ = ಶುಭ ಭಾವನೆ; ಭವಭಾರ = ಸಾಂಸಾರಿಕ ತಾಪ, ಭವಬಂಧನ; ಭಾಷೆ = ವರ್ತನೆ; ಮೂಲ = ಆ ದ್ವಂದ್ವ ಭಾವನೆಗಳಿಗೆ ಮೂಲಕಾರಣವಾದ "ನಾನು ಜೀವ" ಎಂಬ ಮೂಲ ಅಹಂ; ವೇದ್ಯವಾಗು = ಅವಗತವಾಗು; ಸಾಧ್ಯವಾಗು = ಶಿವಪಥದ ಗುರಿಯನ್ನು ತಲುಪು; ಹುಡಿಗುಟ್ಟು = ಸಂಪೂರ್ಣ ಅಳಿದುಹೋಗು;
Written by: Sri Siddeswara Swamiji, Vijayapura