•  
  •  
  •  
  •  
Index   ವಚನ - 533    Search  
 
ಧ್ಯಾನ ಸೂತಕ, ಮೌನ ಸೂತಕ, ಜಪ ಸೂತಕ, ಅನುಷ್ಠಾನ ಸೂತಕ. ಗುಹೇಶ್ವರನೆಂಬ ಲಿಂಗವನರಿದ ಬಳಿಕ ಸೂತಕ ಹಿಂಗಿತ್ತು, ಯಥಾ ಸ್ವೇಚ್ಛೆ.
Transliteration Dhyāna sūtaka, mauna sūtaka, japa sūtaka, anuṣṭhāna sūtaka. Guhēśvaranemba liṅgavanarida baḷika sūtaka hiṅgittu, yathā svēcche.
Hindi Translation ध्यान सूतक, मौन सूतक, जप सूतक, अनुष्टान सूतक, गुहेश्वर कहना लिंग जानने के बाद सूतक दूर हुआ, यथा स्वेच्छा! Translated by: Eswara Sharma M and Govindarao B N
Tamil Translation தியானம், மௌனம், ஜபம், அனுட்டானம் சூதகமாம் குஹேசுவரனெனும் இலிங்கத்தை அறிந்தபிறகு சூதகம் அகன்றது, தன்னிச்சையான முக்தன்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನುಷ್ಠಾನ = ದೇವಚಿಂತನೆಯಲ್ಲಿ ತೊಡಗುವುದು; ಜಪ = ದೇವನಾಮವನು ಮತ್ತೆ ಮತ್ತೆ ನುಡಿಯುವುದು; ಧ್ಯಾನ = ಧ್ಯೇಯವಸ್ತುವಿನತ್ತ ಅವಿಚ್ಚಿನ್ನವಾಗಿ ಹರಿಯುವ ಮನೋವೃತ್ತಿ, ಧ್ಯೇಯದಲ್ಲಿ ಏಕಾಗ್ರತೆ; ಮೌನ = ಮಾತು ಹಾಗೂ ಮನಸ್ಸುಗಳು ಉಪರಮಗೊಳ್ಳುವುದು; ಯಥಾ ಸ್ವೇಚ್ಚೆ = ಲಿಂಗವನರಿದವನ ಬದುಕು ಸ್ವಚ್ಚಂದ, ಸುಂದರ, ವಿಮುಕ್ತ; ಸೂತಕ = ಮಾಲಿನ್ಯ, ಭೇದಬುದ್ದಿಯೆಂಬ ಸೂಕ್ಷ್ಮಮಾಲಿನ್ಯ; Written by: Sri Siddeswara Swamiji, Vijayapura